SHARE

ಬೆಳಗಾವಿ: ಕಳೆದ ಹಲವು ವರ್ಷಗಳಿಂದ ಈ ಸಂಘರ್ಷದಲ್ಲಿ ಸಾಕಷ್ಟು ಜನ ಭಾಗಿ ಆಗಿದ್ದಾರೆ, ಎಲ್ಲರಿಗೂ ನನ್ನ ಅಭಿನಂದನೆಗಳು ಎಂದು ಬೆಳಗಾವಿಯಲ್ಲಿ ಎನ್ ಸಿಪಿ ಅಧ್ಯಕ್ಷ ಶರದ ಪವಾರ ತಿಳಿಸಿದ್ದಾರೆ. ಇಂದು ನಗರದ ಸಿಪಿಎಡ್ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಅವರು ದೇಶದ ಎಲ್ಲ ಭಾಷೆಗಳ ಬಗ್ಗೆ ನನಗೆ ಅಪಾರ ಅಭಿಮಾನ ಇದೆ. ಆದರೆ ಮರಾಠಿ ಭಾಷೆ ನನಗೆ ಅತಿ ಮುಖ್ಯ ಮತ್ತು ಬಹುಪ್ರಿಯ ಭಾಷೆ ಎಂದರು.

ಕರ್ನಾಟಕ ರಾಜ್ಯದ ಬಗ್ಗೆ ನನಗೆ ದ್ವೇಷ ಇಲ್ಲ, ಕರ್ನಾಟಕ ನನಗೆ ಸಹೋದರ ಇದ್ದಂತೆ. ನಾನು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದಲ್ಲಿ ಬರಗಾಲದ ಸಮಸ್ಯೆ ಇತ್ತು. ಕೊಯ್ನಾ ಡ್ಯಾಂ ನಿಂದ ನೀರನ್ನು ಕರ್ನಾಟಕಕ್ಕೆ ಹರಿಸಿದ್ದೇ ನಾನು ಎಂದರು. ಮರಾಠಿ ಭಾಷಿಕರ ನ್ಯಾಯಕ್ಕಾಗಿ ಎಂಇಎಸ್ ಹುಟ್ಟಿಕೊಂಡಿತ್ತು. ಈ ಹಿಂದೆ ಗಡಿಭಾಗದ ಜನರು ಎಂಇಎಸ್ ಕೈ ಹಿಡಿದಿದ್ದಾರೆ. ಮತ್ತೆ ಸಮಯ ಬಂದಿದೆ ಎಂಇಎಸ್ ಗೆ ಗಡಿ ಭಾಗದ ಜನರು ಕೈ ಹಿಡಿಯಬೇಕಿದೆ ಎಂದು ಮತ್ತೆ ಗಡಿತಗಾದೆ ಜೀವಂತ ಇರಬೇಕೆನ್ನುವ ಅಭಿಮತ ವ್ಯಕ್ತಪಡಿಸಿದಂತೆ ಅವರ ಮಾತಿತ್ತು.

ಗಡಿ ಸಮಸ್ಯೆ ಸುಪ್ರೀಂ ಕೋರ್ಟ್‌ನಲ್ಲಿದೆ. ಗಡಿ ಭಾಗದ ಮರಾಠಿಗರು ಎಂಇಎಸ್ ಗೆ ಮತಹಾಕಿದರೆ ಸುಪ್ರೀಂ ಕೋರ್ಟ್ ನಲ್ಲಿ ನಮಗೆ ಮುನ್ನಡೆ ಸಿಗುವ ಸಾಧ್ಯತೆ ಇದೆ. ಬೆಳಗಾವಿ ಮಾತ್ರ ಅಲ್ಲ ಬಾಲ್ಕಿ, ಬೀದರ್ ನಲ್ಲಿ ಕೂಡ ಮರಾಠಿಗರು ಸಮಸ್ಯೆಯಲ್ಲಿದ್ದಾರೆ. ನಾವೆಲ್ಲ ಮುಖಂಡರು ಎಂಇಎಸ್ ಜೊತೆಗೆ ಇದ್ದೇವೆ. ಗಡಿ ಸಮಸ್ಯೆ ಇಷ್ಟ್ರಲ್ಲೆ ಇತ್ಯರ್ಥ ವಾಗುತ್ತದೆ ಎಂದರು.