SHARE

ಬೆಳಗಾವಿ: ಬೆಳಗಾವಿಯಲ್ಲಿ ಹೇಗಾದರೂ ಮಾಡಿ ಸೀಟ್ ಗೆಲ್ಲಲೆಬೇಕೆಂಬ ಪಣ ತೊಟ್ಟಿರುವ ಆಡಳಿತಾರೂಢ ಕಾಂಗ್ರೆಸ್ ತನ್ನ ಪ್ರತಿಸ್ಪರ್ಧಿ ಬಿಜೆಪಿ ಮಣಿಸಲು ತೀವೃ ತಂತ್ರ ರೂಪಿಸಿದೆ. ಮರಾಠ ನಾಯಕ ಎಂಇಎಸ್ ಸಂಘಟನೆಯ ಶಾಸಕ ಸಂಭಾಜಿ ಪಾಟೀಲ ​​​​​​​​​​​​​​​​​​​​​​​​​​ಅವರನ್ನು ಕಾಂಗ್ರೆಸ್​​​​​ಗೆ ಕರೆತರಲು ಕೈ ತೀವ್ರ ಪ್ಲಾನ್ ಮಾಡಿದ್ದು, ಈ ಮೂಲಕ ಮರಾಠ ಮತಗಳನ್ಬು ಬಾಚಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ತುರುಸಿನ ಜಿದ್ದಾಜಿದ್ದಿ ಏರ್ಪಟ್ಟ ಮಧ್ಯೆಯೇ ಇದಕ್ಕೆ ಪೂರಕವಾಗಿಯೇ ಸಂಭಾಜಿ ಪಾಟೀಲ್​​​ ಸಿಎಂ ಸಿದ್ದರಾಮಯ್ಯ ಜತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು ಬಹಿರಂಗಗೊಂಡಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಹಾಕಿರುವ ಸಂಭಾಜಿ ಪಾಟೀಲರು ಈಗಾಗಲೇ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾರೆ. ಇನ್ನು ಸಂಭಾಜಿ ಪಾಟೀಲ ಕಾಂಗ್ರೆಸ್​​​ಗೆ ಬಂದರೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನೂ ಸಹ ನೀಡಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಟಿಕೇಟ್ ಹಂಚಿಕೆ ನಿರ್ಧಾರ ಕಾಯ್ದಿಟ್ಟ ಕಾಂಗ್ರೆಸ್ ಪಕ್ಷ ಯಾರತ್ತ ಒಲಿಯುತ್ತದೆ ಕಾಯ್ದು ನೋಡಬೇಕಿದೆ.