SHARE

ಬೆಳಗಾವಿ: ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳಕರ ಭಾವಚಿತ್ರ ಇರುವ ಒಂದು ಲಾರಿ ಕುಕ್ಕರ್ ಇಂದು ಡಿಸಿ ಬಂಗ್ಲೆ ಎದುರು ಸಿಕ್ಕಿಬಿದ್ದಿದೆ. ನೀತಿ ಸಂಹಿತೆ (code of conduct) ಜಾರಿಯಾದ ನಾಲ್ಕು ದಿನದ ನಂತರ ಕಾಂಗ್ರೆಸ್ ನಾಯಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಭಾವಚಿತ್ರ ಇರುವ ಕುಕ್ಕರ್ ಬಾಕ್ಸಗಳ ವಾಹನ ಸಿಕ್ಕ ನಂತರ 40 ನಿಮಿಷ ಕಳೆದರೂ ಯಾವುದೇ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ್ದರಿಂದ ಲಾರಿ ಸ್ಥಳದಿಂದ ಹೊರಟಿತು. ಆ ನಂತರ ಇಬ್ಬರು ಪೊಲೀಸ್ ಇನ್ಸಪೆಕ್ಟರ್ ಗಳು ಆಗಮಿಸಿ ವಾಹನ ರಸ್ತೆಯಲ್ಲಿ ತಡೆಹಿಡಿದರು. ಆ ನಂತರ ಚುನಾವಣಾ ಅಧಿಕಾರಿಗಳು ಆಗಮಿಸಿದರು.ಈ ಸಂದರ್ಭ ವ್ಯಕ್ತಿಯೊಬ್ಬ ಆಗಮಿಸಿ ತನಗೆ ಸೇರಿದ್ದು, ತನ್ನ ಖಾಸಗಿ ಕಾರ್ಖಾನೆಗೆ ಸೇರಿದ್ದು ಎಂದು ಬಿಜೆಪಿ ಮುಖಂಡ ಅನಿಲ ಬೆನಕೆ ಅವರೊಂದಿಗೆ ಸಾರ್ವಜನಿಕರ ಎದುರೇ ವಾಗ್ವಾದ ನಡೆಸಿದ. ಪೊಲೀಸರು ಮತ್ತು ಚುನಾವಣಾ ಸಿಬ್ಬಂಧಿ ತಪಾಸಣೆ ಮುಂದುವರೆಸಿದರು. ಅಧಿಕಾರಿಗಳೊಂದಿಗೆ ವ್ಯಕ್ತಿಯೊಬ್ಬ ತೀವೃ ವಾಗ್ವಾದ ನಡೆಸಿ ಕುಕ್ಕರ್ ಲಾರಿ ಸಮರ್ಥಿಸಿಕೊಳ್ಳಲು ಯತ್ನಿಸಿದ, ಆದರೂ ಅಧಿಕಾರಿಗಳು ವಾಹನ ವಶಕ್ಕೆ ಪಡೆದು ಕೇಸ್ ದಾಖಲಿಸಲು ಮುಂದಾದರು.