SHARE

ಮುಂಬೈ: ಬ್ಯಾಡ್​​ ಬಾಯ್​ ಸಲ್ಲು ಅವರ ಫಿಟ್​​ನೆಸ್​​ ನೋಡಿದ್ರೆ ಎಂಥವರೂ ಕೂಡ ಜಿಮ್ ಕಡೆ ಮುಖ ಮಾಡುತ್ತಾರೆ. ಇನ್ನು ಥೇಟ್​​ ಸಲ್ಮಾನ್​ ಖಾನ್​​ ಥರವೇ ದೇಹ, ಸೈಡಿಂದ ನೋಡಿದ್ರೆ ಸಲ್ಲುನೇ ನೋಡಿದಂತೆ ಅನ್ನಿಸೋ ಈ ವ್ಯಕ್ತಿ ಹೆಸರು ಪರ್ವೇಜ್​ ಖಾಸಿ.

ಸಲ್ಮಾನ್ ಖಾನ್​​ಗೆ ಸಿನಿಮಾಗಳಲ್ಲಿ ಡ್ಯೂಪ್​ ಮಾಡೋ ಪರ್ವೇಜ್​ ಖಾಸಿಗೂ ಕೂಡ ಸಾಕಷ್ಟು ಅಭಿಮಾನಿಗಳಿದ್ದಾರೆ. ಇವರ ಫೋಟೋಗಳನ್ನ ನೋಡಿದರೆ ನೀವೂ ಕೂಡ ಒಂದು ಕ್ಷಣ ದಂಗಾಗೋದು ಗ್ಯಾರಂಟಿ. ಪರ್ವೇಜ್​ ಅವರ ಇನ್ಸ್​​ಟಾಗ್ರಾಂ ಅಕೌಂಟ್​​ ನಲ್ಲಿ ಒಮ್ಮೆ ಕಣ್ಣಾಡಿಸಿದರೆ ಸಲ್ಲು ಭಾಯ್​​ ಜೊತೆ ಹಾಗೂ ಇತರೆ ನಟರ ಜೊತೆ ಸೆಟ್​ನಲ್ಲಿ ತೆಗೆಸಿಕೊಂಡಿರೋ ಸಾಕಷ್ಟು ಫೋಟೋಗಳು ಕಾಣಸಿಗುತ್ತವೆ. ಪರ್ವೇ​​ಜ್‌ಗೆ ಇನ್ಸ್​​ಟಾಗ್ರಾಂನಲ್ಲಿ ಅಭಿಮಾನಿಗಳ ಸಂಖ್ಯೆಯೂ ಸಿಕ್ಕಾಪಟ್ಟೆ ಇದ್ದು, 50 ಸಾವಿರಕ್ಕೂ ಹೆಚ್ಚು ಫ್ಯಾನ್​ ಫಾಲೋವರ್​ಗಳಿದ್ದಾರೆ.