SHARE

ಬೆಳಗಾವಿ: ಸೈನ್ಯಾಡಳಿತದ ಕಾಂಟೊನ್ಮೆಂಟ್ ಪ್ರಾಥಮಿಕ ಶಾಲೆಯಲ್ಲಿ ಕಳೆದ ಒಂದು ವಾರದಿಂದ ನಡೆದಿದ್ದ ಹ್ಯಾಂಡ್ ಬಾಲ್ ಕ್ರೀಡಾ ಶಿಬಿರ ಸಮಾರೋಪ ಸಮಾರಂಭ ಇಂದು ನಡೆಯಿತು. 2017-18ನೇ ಸಾಲಿನ ಹ್ಯಾಂಡ್ ಬಾಲ್ ಶಿಬಿರವು ಕಳೆದ ಮಾರ್ಚ್ 24ನೇ ರಿಂದ ಪ್ರಾರಂಭವಾಗಿ ಇಂದು(4 ಏಪ್ರಿಲ್) ಮುಕ್ತಾಯವಾಯಿತು. ರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಆಟಗಾರರು ಸೂಕ್ತ ತರಬೇತಿ ಕೊಟ್ಟು ಮಕ್ಕಳ ಕ್ರೀಡಾಕೂಟ ನೆರವೇರಿಸಿದರು. ಈ ಶಿಬಿರದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಅಮಿತ ಉತ್ಸಾಹದಿಂದ ಭಾಗವಹಿಸಿದ್ದರು.

ಕೋಚ್ ಆಗಿ ಆಗಮಿಸಿದ್ದ ಚಿಂತಾಮಣಿ ಉಪ್ಪಾರ (P.D)ಸಮೀರವಾಡಿ, ವಿನೋದ್.ಬಾಲಿಕಾಯಿ.(ರಾಷ್ಟ್ರೀಯ ಕ್ರೀಡಾಪಟು), ರಾಹುಲ್.(ರಾಷ್ಟ್ರೀಯ ಕ್ರೀಡಾಪಟು), ಚಿನ್ನಸ್ವಾಮಿ(KSP)ಮಕ್ಕಳಿಗೆ ಹ್ಯಾಂಡ್ ಬಾಲ್ ಕ್ರೀಡೆಯ ಆಯಾಮ ಕಲಿಸಿಕೊಟ್ಟರು. ಸಮಾರೋಪ ಸಮಾರಂಭದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ.ಎಸ್. ಭಜಂತ್ರಿ ಸ್ವಾಗತ ಕೋರಿದರು. ಮರಾಠಿ ಪ್ರೌಢ ಶಾಲೆಯ ಹೆಡ್ ಮಿಸ್ಟ್ರೆಸ್ ಅ. ಆ. ಗಣಾಚಾರಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಪ್ರಕಾಶ ನರಗಟ್ಟಿ ಆಗಮಿಸಿದ್ದರು. ಕಾಂಟೊನ್ಮೆಂಟ್ ಸಿಇಓ ದಿವ್ಯಾ ಶಿವರಾಮ್ ಶಿಬಿರಕ್ಕೆ ಮಾರ್ಗದರ್ಶ ನೀಡಿದರು.