SHARE

ಕ್ಯಾಲಿಫೋರ್ನಿಯಾ: ಯೂಟ್ಯೂಬ್​ ಕಚೇರಿಯಲ್ಲಿ ಗುಂಡಿನ ದಾಳಿ ನಡೆಸಿದ ಮಹಿಳೆಯ ಗುರುತು ಪತ್ತೆಯಾಗಿದೆ. ದಾಳಿ ನಡೆಸಿದ ಮಹಿಳೆಯನ್ನು ನಸೀಮಾ ಅಗ್ಧಾಮ್​ ಎಂದು ಗುರುತಿಸಲಾಗಿದೆ.

ನಸೀಮಾ ಅಗ್ಧಾಮ್ ನಸೀಮಾವಂಡರ್​1 ಎನ್ನುವ ಚಾನೆಲ್​ ಹೊಂದಿದ್ದಳು. ಈ ಹಿಂದೆ ಯೂಟ್ಯೂಬ್ ತನ್ನ ವಿಡಿಯೋಗಳ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಹಾಗೂ ಫಿಲ್ಟರ್ ಮಾಡುತ್ತಿದೆ ಅಂತ ಗೂಗಲ್​ ವಿರುದ್ಧ ಹರಿಹಾಯ್ದಿದ್ದಳು.

ಯೂಟ್ಯೂಬ್​ನ ನಿಯಮ ಹಾಗೂ ನಿರ್ಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯೂಟ್ಯೂಬ್ ಆಕೆಯ ಚಾನೆಲ್​ ಅನ್ನ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಯೂಟ್ಯೂಬ್ ಕಚೇರಿಗೆ ನುಗ್ಗಿದ್ದ ನಸೀಮಾ ಕಚೇರಿಯಲ್ಲಿ ಮನಬಂದತೆ ಗುಂಡಿನ ದಾಳಿ ನಡೆಸಿದ್ದಾಳೆ ಎಂದು ತಿಳಿದು ಬಂದಿದೆ.

39 ವರ್ಷದ ನಸೀಮಾ ತನ್ನದೇ ಆದ nasimesabz.com ಎಂಬ ವೆಬ್​ಸೈಟ್​ ಕೂಡ ಹೊಂದಿದ್ದಳು ಎಂದು ಹೇಳಲಾಗುತ್ತಿದೆ.