SHARE

ಜೋಧಪುರ: (Blackbuck Poaching Case) ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಜರಂಗಿ ಭಾಯ್​ಜಾನ್​ ಸಲ್ಮಾನ್​ ಖಾನ್​ ಅಪರಾಧಿ ಎಂದು ಜೋಧ್‌ಪುರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತೀರ್ಪು ಪ್ರಕಟಿಸಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದಾಖಲಾಗಿರುವ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸೆಪ್ಟಂಬರ್​ನಲ್ಲಿ ಅಂತಿಮ ಹಂತದ ವಿಚಾರಣೆ ಆರಂಭಿಸಿದ್ದ ಜೋಧ್‌ಪುರ ಮ್ಯಾಜಿಸ್ಟ್ರೇಟ್‌ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಅಂತಿಮ ತೀರ್ಪು ಪ್ರಕಟಿಸಿರುವ ಕೋರ್ಟ್ ಸಲ್ಮಾನ್​ ಖಾನ್ ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ‘1998ರಲ್ಲಿ ಸಿನಿಮಾ ಒಂದರ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಪರವಾನಗಿ ಇಲ್ಲದ ಬಂದೂಕು ಬಳಸಿ ಎರಡು ಕೃಷ್ಣಮೃಗವನ್ನು ಬೇಟೆಯಾಡಿದ್ದರು. ಬೇಟೆಯಾಡಿದ್ದ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿ ಕೇಸ್‌ ದಾಖಲಾಗಿತ್ತು. ಈ ಸಂಬಂಧ ಕಳೆದ ಮಾರ್ಚ್‌ 28ರಂದು ವಾದ–ಪ್ರತಿವಾದ ಮುಗಿಸಿದ್ದ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಸಲ್ಮಾನ್​ ಖಾನ್​ ಅಪರಾಧಿ ಎಂದು ಜೋಧ್‌ಪುರ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ತೀರ್ಪು ಪ್ರಕಟಿಸಿದೆ.

ಇತರೆ ಆರೋಪಿಗಳು ನಿರ್ದೋಷಿ: ಇದೇ ಪ್ರಕರಣ ಸಂಬಂಧ ಸಲ್ಮಾನ್​ ಖಾನ್​ ಅಷ್ಟೇ ಅಲ್ಲದೇ ಸೈಫ್​ ಆಲಿ ಖಾನ್​, ಟಬು, ಸೋನಾಲಿ ಬೇಂದ್ರೆ ಹಾಗೂ ನೀಲಂ ವಿರುದ್ಧವೂ ಕೇಸ್​ ದಾಖಲಾಗಿತ್ತು. ಇವರ ವಿರುದ್ಧದ ಆರೋಪವನ್ನು ಕೋರ್ಟ್​ ನಿರ್ದೋಷಿ ಎಂದು ಪ್ರಕಟಿಸಿದೆ.