SHARE

ಬೆಳಗಾವಿ: ಇಂದು ಬೆಳಿಗ್ಗೆ ತಪಾಸಣೆ ನಡೆಸಿದ ಚುನಾವಣಾಧಿಕಾರಿಗಳು ಹಾಗೂ ಅಬಕಾರಿ ಸಿಬ್ಬಂಧಿ ಕಣಕುಂಬಿ ಚೆಕಪೋಸ್ಟನಲ್ಲಿ ಅಕ್ರಮ ಮದ್ಯ ಸಾಗಾಣೆ ವಶಪಡಿಸಿಕೊಂಡಿದ್ದಾರೆ. ಕಣಕುಂಬಿ ಚೆಕ್ ಪೋಸ್ಟನಲ್ಲಿ 65 ಲೀಟರ್ ಗೋವಾ ಮದ್ಯ, 36 ಲೀಟರ್ ಬೀಯರ್, ಮೂರು ಬೈಕ್ ಸೇರಿ ಐವರು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್. ಜಿಯಾವುಲ್ಲಾ ತಿಳಿಸಿದ್ದಾರೆ.