SHARE

ಬೆಳಗಾವಿ: ದಿವಂಗತರಾದ ಕಲ್ಲಪ್ಪ ಹಂಡಿಭಾಗ್​ ಅವರ ಪತ್ನಿಗೆ ಸರ್ಕಾರಿ ಕೆಲಸ ಕೊಡಿಸೋಕು ನಾನೇ ಬರಬೇಕಾಯ್ತು. ‘ಇಲ್ಲವಾದರೆ ಆ ಹೆಣ್ಣು ಮಗಳು ಸಮಾಜದ ಕೆಟ್ಟ ಕಣ್ಣಿಗೆ ಗುರಿಯಾಗಿ ಮೈ ಮಾರಿಕೊಂಡು ಜೀವನ ಮಾಡಬೇಕಿತ್ತು’ ಎಂಬ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಮಹಿಳೆಯರಿಗೆ ಅತ್ಯಂತ ಗೌರವ ಕೊಡುವ ವ್ಯಕ್ತಿ ನಾನು ಎಂದು ಹೆಚ್​ಡಿಕೆ ಸಮರ್ಥಿಸಿಕೊಂಡರು. ಹಂಡಿಭಾಗರ ಪತ್ನಿಯ ಬಗೆಗಿನ ನನ್ನ ಹೇಳಿಕೆಯಿಂದ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ದ. ಆದರೆ ಮಾಧ್ಯಮಗಳು ಚುನಾವಣೆ ಸಂದರ್ಭದಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಕೈ ಜೋಡಿಸಿ ಮಾಧ್ಯಮಗಳಿಗೆ ಮನವಿ ಮಾಡುತ್ತೇನೆ. ಜನರನ್ನು ದಾರಿ ತಪ್ಪಿಸಬೇಡಿ ಎಂದರು.