SHARE

ಬೆಳಗಾವಿ: ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಇಂದು ಸಂಜೆ ಮಹಾರಾಷ್ಟ್ರ ಗಡಿ ಅಂಚಿನ ಚೆಕ್ ಪೋಸ್ಟಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.ರಾಕಸಕೊಪ್ಪ, ಬಾಚಿ, ಬೆಕ್ಕಿನಕೇರಿ ಚೆಕ್ ಪೋಸ್ಟಗಳಿಗೆ ಪೊಲೀಸ್ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ಅವರೊಂದಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.ಭದ್ರತಾ ವ್ಯವಸ್ಥೆ, ಪ್ರತಿ ವಾಹನದ ತಪಾಸಣೆ ಭದ್ರತಾ ಸಿಬ್ಬಂಧಿ ನಡೆಸುತ್ತಿರುವ ಬಗ್ಗೆ ಡಿಸಿ ಖಾತರಿ ಮಾಡಿಕೊಂಡರು. ಭದ್ರತಾ ರಿಜಿಸ್ಟರ್ ಗಳನ್ನು ತಪಾಸಣೆ ಮಾಡಿದ ಜಿಲ್ಲಾಧಿಕಾರಿ ಯಾವುದೇ ಕಾರಣಕ್ಕೂ ವಾಹನಗಳನ್ನು ಸಂಪೂರ್ಣ ತಪಾಸಿಸದೇ ಬಿಡುವಂತಿಲ್ಲ ಎಂದು ಡಿಸಿ ಪೊಲೀಸರಿಗೆ ಕಟ್ಟಪ್ಪಣೆ ಮಾಡಿದರು.