SHARE

ಬೆಳಗಾವಿ: ಡಾ.ಬಿ. ಆರ್. ಅಂಬೇಡ್ಕರ್ ಅವರ ಜನುಮದಿನವನ್ನು ಇಂದು ಜಿಲ್ಲಾಡಳಿತದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು. ಅಂಬೇಡ್ಕರ್ ಉದ್ಯಾನದಲ್ಲಿ ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ, ಉತ್ತರವಲಯ ಐಜಿಪಿ ಅಲೋಕಕುಮಾರ, ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಆಯುಕ್ತ ಡಾ.ಡಿ. ಸಿ. ರಾಜಪ್ಪ ಹಾಗೂ ಸಿಇಓ ಆರ್. ರಾಮಚಂದ್ರನ್ ಅವರು ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.ಡಾ. ಅಂಬೇಡ್ಕರ್ ಅವರನ್ನು ನೆನಪಿಸುವ ಭಜನೆ, ಕೀರ್ತನೆಗಳು ಕೇಳಿ ಬಂದವು. ಮಹಾಮಾನವತಾವಾದಿ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ದೇಶದ ಶೋಷಿತ ವರ್ಗಗಳ ಬೆಳಕಾಗಿ ಸಮಾಜದಲ್ಲಿ ಸಮಾನತೆ-ಸಾಮರಸ್ಯ ತರುವಲ್ಲಿ ಶ್ರಮಿಸಿದ ಮಹಾಚೇತನ ಎಂದು ಐಜಿಪಿ ಅಲೋಕಕುಮಾರ ಬಣ್ಣಿಸಿದರು.

ಪಾಲಿಕೆ ಆಯುಕ್ತ ಕೃಷ್ಟೇಗೌಡ ತಾಯನ್ನವರ, ಡಿಸಿಪಿ ಸೀಮಾ ಲಾಟಕರ, ಸಿಆರ್ ಸೆಲ್ ಎಸ್ಪಿ ಎಸ್. ಟಿ. ಪಡಗನ್ನವರ, ಎಡಿಸಿ ಡಾ. ಬೂದೆಪ್ಪ, ಪಾಲಿಕೆ ಎಂಜಿನೀಯರ್ ಲಕ್ಷ್ಮೀ ನಿಪ್ಪಾನಿಕರ, ಸಮಾಜ ಕಲ್ಯಾಣಾಧಿಕಾರಿಗಳಾದ ಮುನಿರಾಜು, ಉಮಾ ಸಾಲಿಗೌಡರ, ಪುಂಡಲೀಕ ಅನವಾಲ ಸೇರಿದಂತೆ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಭಾಗವಹಿಸಿದರು.