SHARE

ಬೆಳಗಾವಿ: ಅಂತೂ ಎಐಸಿಸಿ ತನ್ನ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಈಗ ಬಿಡುಗಡೆಗೊಳಿಸಿದ್ದು ಕಾರ್ಯಕರ್ತರ ಕುತೂಹಲಕ್ಕೆ ನಾಂದಿ ಹಾಡಿದೆ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ನ ಗ್ರಾಮೀಣ, ನಗರ ಉತ್ತರಕ್ಕೆ ಫಿರೋಜ್ ಸೇಠ್ ಹಾಗೂ ಬೆಳಗಾವಿ ದಕ್ಷಿಣಕ್ಕೆ ತುಮಕೂರು ಮೂಲದ ಎಂ. ಡಿ. ಲಕ್ಷ್ಮೀನಾರಾಯಣ ಟಿಕೇಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅದೇ ರೀತಿ ಕುರುಬರು ಹಾಗೂ ಉಪ್ಪಾರ ಜನಾಂಗ ಹೆಚ್ಚಿಗಿರುವ ಅರಭಾವಿ ಕ್ಷೇತ್ರಕ್ಕೆ ಅರವಿಂದ ದಳವಾಯಿ, ಹುಕ್ಕೇರಿಗೆ ಎ. ಬಿ. ಪಾಟೀಲ, ಖಾನಾಪುರಕ್ಕೆ ಡಾ. ಅಂಜಲಿ ನಿಂಬಾಳಕರ ಸ್ಪರ್ಧಿಸಲಿದ್ದಾರೆ.