SHARE

ಬೆಳಗಾವಿ: ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಮಾದಿಗ ಸಮಾಜಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಮಾದಿಗ ಸಮಾಜದ ಮುಖಂಡರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗೊಷ್ಠಿಯಲ್ಲಿ ವಿಷಯ ತಿಳಿಸಿದ ಪ್ರಕಾಶ ಕೆಳಗೇರಿ ಬೆಳಗಾವಿ & ಮೈಸೂರು ವಿಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಾದಿಗ ಸಮಾಜವಿದೆ. ಆದರೂ ಒಬ್ಬನೇ ಒಬ್ಬ ಮಾದಿಗ ಅಭ್ಯರ್ಥಿಗೆ ಕಾಂಗ್ರೆಸ್ ಬೆಳಗಾವಿ ಮೈಸೂರು ವಿಭಾಗದಲ್ಲಿ ಟಿಕೇಟ್ ನೀಡಿಲ್ಲ. ನಮ್ಮ ಸಮಾಜದ ಆರ್. ಬಿ. ತಿಮ್ಮಾಪೂರ & ಅಲ್ಕೋಡು ಹನುಮಂತಪ್ಪ ಅವರಿಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ. ಕೂಡಲೇ ಕಾಂಗ್ರೆಸ್ ಪಕ್ಷ ತನ್ನ ತಪ್ಪನ್ನು ಸರಿಪಡಿಸಿಕೊಂಡು ಮಾದಿಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು, ಇಲ್ಲದಿದ್ದರೆ ನಮ್ಮ ಸಮಾಜ ಕಾಂಗ್ರೆಸ್ ವಿರುದ್ಧ ಸೂಕ್ತ ನಿರ್ಧಾರ ತಳೆಯಲು ಸಮಯ ಇದೆ ಎಂದು ಮಾರ್ಮಿಕವಾಗಿ ಎಚ್ಚರಿಸಿದರು.

ಯಲ್ಲಪ್ಪ ಹುದಲಿ, ಮಲ್ಲೇಶ ಯಡಾಲ, ಶಿವಾನಂದ ಹಂಚಿನಮನಿ, ಸಿದ್ರಾಯಿ ಮೇಲಿನಮನಿ, ಪ್ರಶಾಂತರಾವ ಐಹೊಳೆ, ಹನುಮಂತ ಅರ್ದಾಪುರ, ಬಸವರಾಜ ಹೊಳಿಕಟ್ಟಿ, ಸದಾಶಿವ ದೊಡ್ಡಮನಿ, ಸುನಿತಾ ಐಹೊಳೆ, ಮಹಾದೇವಿ ಹೊಳಿಕಟ್ಟಿ, ಸದಾಶಿವ ಮಸಾಳೆ, ಅನಿಲ ತಳವಾರ, ಶಂಕರ ಹುಂಡೇಕರ, ತಮ್ಮನ್ನ ಮಾದರ ಇತರರು ಉಪಸ್ಥಿತರಿದ್ದರು.