SHARE

ಬೆಳಗಾವಿ: ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಸವದತ್ತಿ ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಸವದತ್ತಿ ಯಲ್ಲಮ್ಮಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಧಿಕೃತ ಅಭ್ಯಥಿ೯ಯಾಗಿ ಆನಂದ ವಿಶ್ವನಾಥ ಚಂದ್ರಶೇಖರ ಮಾಮನಿ ಅವರು ಚುನಾವಣಾಧಿಕಾರಿ ಡಿ. ಎಸ್. ಹವಾಲ್ದಾರ ಅವರಿಗೆ ಒಟ್ಟು 5 ಜನ ಬೆಂಬಲಿಗರೊಂದಿಗೆ 11ರಿಂದ 11:45 ನಡುವೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಹೊರಗಡೆ 400ಕ್ಕೂ ಹೆಚ್ಚು ಜನ ಕಾರ್ಯಕತ೯ರು-ಬೆಂಬಲಿಗರು ಸೇರಿದ್ದರು.