SHARE

ಬೆಳಗಾವಿ: ಚುನಾವಣಾ ಕಣಕ್ಕೆ ಬಿಜೆಪಿ ಅಭ್ಯರ್ಥಿಗಳು ಈಗ ಅಧಿಕೃತವಾಗಿ ಇಳಿದಿದ್ದು ಕಾಂಗ್ರೆಸ್ & ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ನಡೆಯುವುದು ಖಚಿತವಾಗಿದೆ. ಬೆಳಗಾವಿ ಉತ್ತರಕ್ಕೆ ನ್ಯಾಯವಾದಿ ಅನಿಲ ಬೆನಕೆ v/s ಫಿರೋಜ್ ಸೇಠ್, ಬೆಳಗಾವಿ ದಕ್ಷಿಣ ಮಾಜಿ ಶಾಸಕ ಅಭಯ ಪಾಟೀಲ v/s ಎಂ. ಡಿ. ಲಕ್ಷ್ಮೀ ನಾರಾಯಣ ಹಾಗೂ ಖಾನಾಪುರ ಕ್ಷೇತ್ರಕ್ಕೆ ಮಾಜಿ ಶಾಸಕ ದಿ. ಪ್ರಹ್ಲಾದ ರೇಮಾಣಿ ಪುತ್ರ ಜ್ಯೋತಿಬಾ ರೇಮಾಣಿ v/s ಡಾ. ಅಂಜಲಿ ನಿಂಬಾಳಕರ ನೇಮಕವಾಗಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಸೆಣಸಲಿದ್ದಾರೆ.

ಈಗಾಗಲೇ ಬಿಜೆಪಿ ಅಭ್ಯರ್ಥಿಗಳು ತಮಗೆ ಸಿಕ್ಕಿದೆ ಎನ್ನಲಾದ ಪಕ್ಷದ ‘ಬಿ’ ಫಾರ್ಮ್ ಪ್ರದರ್ಶಿಸಿ ಜನತೆಯ ಕುತೂಹಲ ತಣಿಸಿದ್ದಾರೆ. ಬಿಜೆಪಿ ಪಕ್ಷದಿಂದ ಅಧಿಕೃತವಾಗಿ ಇನ್ನೂ ಟಿಕೇಟ್ ಘೋಷಣೆಯಾಗದೇ ಇರುವುದು ಸಹ ಗಮನಾರ್ಹ.