SHARE

ಬೆಳಗಾವಿ: ಬೆಳಗಾವಿ ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿ ₹7 ಕೋಟಿ ರೂಪಾಯಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಆದ್ರೆ ಮಧ್ನಾಹ್ನದ ಹೊತ್ತಿಗೆ ₹7 ಕೋಟಿ ಇದ್ದುದು, 48 ಸಾವಿರ ಮಾತ್ರ ಉಳಿದಿತ್ತು. ಇದೇನಿದು ಉಳಿದ ಕೋಟ್ಯಂತರ ರೂಪಾಯಿ ಯಾರ ಜೇಬು ಸೇರಿತು ಅನ್ನೋ ಕೂತುಹಲವಾ ಹಾಗಾದ್ರೆ ಈ ಸ್ಟೋರಿ ಓದಿ.ಇಂದು ಬೆಳಿಗ್ಗೆ ಬೆಳಗಾವಿ ಪೋಲಿಸರು ಮತದಾರರಿಗೆ ಹಂಚಲು ಪ್ರಿಂಟ್ ಮಾಡಿದ್ದ 7ಕೋಟಿ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಅನ್ನೋ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಬೆಳಿಗ್ಗೆ ಭಾರೀ ಜೋಶ್ ನಲ್ಲಿದ್ದ ಪೋಲಿಸರು ಮಧ್ಯಾಹ್ನದ ಹೊತ್ತಿಗೆ ಫುಲ್ ಡಲ್ ಹೊಡೆದ್ರು. ಯಾಕಂದ್ರೆ ಬೆಳಗಾವಿ ಪೋಲಿಸರ ‘ಆಪರೇಷನ್ ಏಳುಕೋಟಿ’ ಠುಸ್ ಆಗಿತ್ತು. ಹೌದು ಪೋಲಿಸರು ವಶಪಡಿಸಿಕೊಂಡ ಹಣವೆಷ್ಟು ಅಂತ ಸ್ವತಃ ಬೆಳಗಾವಿ ಪೋಲಿಸ್ ಕಮೀಶನರ್ ಡಿ.ಸಿ.ರಾಜಪ್ಪ ಅವರೇನಂತಾರೆಂದರೆ. ಪೋಲಿಸರು ಖೋಟಾ ನೋಟುಗಳನ್ನು ವಶಪಡಿಸಿಕೊಂಡು ಠಾಣೆಗೆ ಬಂದು ನೋಡುವಷ್ಟರಲ್ಲಿ ಬಿಗ್ ಶಾಕ್ ಕಾದಿತ್ತು.

ಅದೇನಂದ್ರೆ 24 ಎರಡು ಸಾವಿರ ಮುಖಬೆಲೆಯ ನೋಟುಗಳ 48 ಸಾವಿರ ಹೊರತು ಪಡಿಸಿದ್ರೆ ಎಲ್ಲ ನೋಟುಗಳ ಮೇಲೆ Children Bank ಎಂದು ಪ್ರಿಂಟ್ ಮಾಡಲಾಗಿದ್ದು, ನೋಟ್ ಮುಖಬೆಲೆಯ ಜಾಗದಲ್ಲಿ 0000 ಎಂದು ಪ್ರಿಂಟ್ ಹಾಕಲಾಗಿದೆ. ಈ ಬಗ್ಗೆ ಪೋಲಿಸರು ವಿಚಾರಿಸಿದಾಗ 15ಸೆಕೆಂಡ್ ಎಂಬ ಸಿನಿಮಾ ಶೂಟಿಂಗ್ ಗೋಸ್ಕರ್ ಪ್ರಿಂಟ್ ಹಾಕಿದ್ದೇವೆ ಎಂದು ಆರೋಪಿತ ತಿಳಿಸಿದ್ದಾನೆ. ಒಟ್ಟಾಗಿ ಬೆಳಗಾವಿ ಪೋಲಿಸರ ಭರ್ಜರಿ ಭೇಟೆ ಮಿಸ್ ಆಗಿದ್ದು ಸಿಕ್ಕಿರುವ 24 ಖೋಟಾ ನೋಟುಗಳ ಕುರಿತು ಪ್ರಕರಣ ದಾಖಲಿಸಿಕೊಂಡು ಈಗ ತನಿಖೆ ನಡೆಸಿದ್ದಾರೆ.

ವರ್ಗಾವಣೆ ಹೊಸ್ತಿಲಲ್ಲಿ ಪೊಲೀಸ್ ಆಯುಕ್ತ ಡಾ. ಡಿ. ಸಿ. ರಾಜಪ್ಪ ತೀವೃ ಮಜುಗುರಕ್ಕೊಳಗಾಗಿದ್ದು, ಮಕ್ಕಳಾಟದ ಫೇಕ್ ನೋಟ್ ಗಳ ಬಗ್ಗೆ ಕೂಲಂಕೂಷ ವಿಚಾರಿಸದೇ ಅವಸರಕ್ಕೆ ಬಿದ್ದು ನಗೆಗಡಲಿಗೀಡಾದರು ಎನ್ನಲಾಗುತ್ತಿದೆ. ಚಿತ್ರ ನಿರ್ಮಾಣ ಮಾಡುತ್ತಿದ್ದು ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಇಂತಹ ನೋಟುಗಳನ್ನು ಮಾಡಲಾಗಿತ್ತು ಎಂದು ಬಂಧಿತ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ವಿಣಾರಣೆ ನಡೆಸಿದ್ದರೂ, ಮಜುಗುರಕ್ಕೊಳಗಾಗಿದ್ದು ನಿಜ.