SHARE

ಬೆಳಗಾವಿ: ಖಾನಾಪುರದ ನವೀಕೃತ ಮಿಲಾಗ್ರೆಸ್ ಚರ್ಚ್ ಉದ್ಘಾಟನೆ ಸೋಮವಾರ ನಡೆಯಿತು. ಸಮಸ್ತ ಸಾವಿರಾರು ಕ್ರೈಸ್ತ್ ಬಾಂಧವರ ಸಮ್ಮುಖದಲ್ಲಿ ದೇವ ‘ಕ್ರಿಸ್ತನ ದೇವಾಲಯಕ್ಕೆ’ ಕಾಂಗ್ರೆಸ್ ನಾಯಕಿ ಡಾ. ಅಂಜಲಿ ಹೇಮಂತ ನಿಂಬಾಳಕರ ಚಾಲನೆ ನೀಡಿದರು.ಮಾನವನ ಜೀವನ ಉದ್ಧಾರಕ್ಕೆ ದೇವರ ಮಗನಾಗಿ ಕ್ರಿಸ್ತ ಯೇಸು ಹುಟ್ಟಿ ಸಮಾಜಕ್ಕೆ ಸಂದೇಶ ಸಾರಿದ್ದಾರೆ. ಪರಮೆಶ್ವರನ ಏಕೈಕ ಪುತ್ರ ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ವಿಶ್ವಾಸ ಇಟ್ಟು ಜೀವಿಸುವವರು, ಅನಂತ ಆನಂದ ಜೀವನ ಪಡೆಯುವರು ಎಂದು ಡಾ. ಅಂಜಲಿ ತಿಳಿಸಿದರು. ಕ್ರಿಸ್ತ ಯೇಸುವಿನ ಮಹಿಮೆ ಸಾರುವ ಕೀರ್ತನೆ-ಭಜನೆ ಹಾಗೂ ಆತನಲ್ಲಿ ಪ್ರಾರ್ಥನೆ ವಿಜ್ಞಾಪನೆ ನಡೆಯಿತು.