SHARE

ಬೆಳಗಾವಿ/ಖಾನಾಪುರ: ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಸಮಾಜ ಸುಧಾರಕ ಶರಣ ಶ್ರೀ ಬಸವೇಶ್ವರರ ಜಯಂತಿ ಹಾಗೂ ಸಾಮ್ರಾಟ ಶಿವಜಯಂತಿ ಇಂದು ಖಾನಾಪುರ ಪಟ್ಟಣದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಕಾಂಗ್ರೆಸ್ ನಾಯಕಿ ಡಾ. ಅಂಜಲಿ ಹೇಮಂತ ನಿಂಬಾಳ್ಕರ್ ಮಾತನಾಡಿದರು. 12 ನೇ ಶತಮಾನದಲ್ಲಿ ಬಸವಣ್ಣನವರು ಜಗದ ಉದ್ಧಾರಕರಾಗಿ ಅವತರಿಸಿದರು. ಅಂದಿನ ಕಾಲದಲ್ಲೇ ಚಾಲ್ತಿಯಲ್ಲಿದ್ದ ಶೋಷಣೆ ಕಂದಾಚಾರವನ್ನು ತಮ್ಮ ವಚನಗಳ ಮೂಲಕ ಹತ್ತಿಕ್ಕಿ ಸ್ವಸ್ಥ ಸಮಾಜ ನಿರ್ಮಿಸಲು ಹೋರಾಡಿದ ಧೀಮಂತ ಶಿವಶರಣ ಅಣ್ಣ ಬಸವಣ್ಣನವರು. ಅವರ ವಚನಗಳ ಸಾರ ಅಂದು ಇಂದು ಮತ್ತೆ ಮುಂದಿನ ಪೀಳಿಗೆಗೆ ಪ್ರಸ್ತುತವಾಗಿದೆ ಎಂದು ಡಾ. ಅಂಜಲಿ ಅಭಿಪ್ರಾಯಪಟ್ಟರು.ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಶ್ರೀ ಬಸವ ಹಾಗೂ ಶಿವ ಭಕ್ತರು ಹರ್ಷೋದ್ಘಾರದ ಮೂಲಕ ದೇಶದ ಮಹಾಪುರುಷದ್ವಯರ ಜಯಂತಿ ಆಚರಿಸಿದರು.