SHARE

ಬೆಳಗಾವಿ/ಖಾನಾಪುರ: ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಕಳೆದ ಐದು ವರ್ಷಗಳಿಂದ ಖಾನಾಪುರ ತಾಲೂಕಿನ ಜನತೆಯ ಸೇವೆಯಲ್ಲಿ ಅವಿರತ ತೊಡಗಿಕೊಂಡಿದ್ದು ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕು ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.ಇಂದು ಖಾನಾಪುರ ಪಟ್ಟಣದಲ್ಲಿ ಮಾತನಾಡಿದ ಅವರು ನೀರಾವರಿ ಯೋಜನೆಗಳಿಗೆ ₹74.5 ಕೋಟಿ ಹಣ ಖಾನಾಪುರ ತಾಲೂಕಿಗೆ ತರುವಲ್ಲಿ ಡಾ. ಅಂಜಲಿ ಶ್ರಮ ಗಮನಾರ್ಹವಾಗಿದೆ. ಬಡ ಮಕ್ಕಳ ಶಿಕ್ಷಣ & ಅವರಿಗೆ ಮೂಲಭೂತ ಸೌಕರ್ಯ ಒದಗಿಸಿದ್ದು, ಮಹಿಳೆಯರಿಗೆ ಉದ್ಯೋಗಾವಕಾಶ, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ, ಕ್ರಿಕೇಟ್-ಕಬಡ್ಡಿಯಂತಹ ಸಾರ್ವಜನಿಕ ಆಟಗಳ ಆಯೋಜನೆ ಮಾಡಿಸಿದ್ದರು ಇಂಥ ಅನೇಕ ಕಲ್ಯಾಣ ಕಾರ್ಯಕ್ರಮಗಳ ಆಯೋಜನೆಗೆ ಡಾ. ಅಂಜಲಿ ಆಯ್ಕೆ ಸೂಕ್ತ ಎಂದು ಸತೀಶ ಜನತೆಗೆ ಮನವಿ ಮಾಡಿದರು.ಡಾ. ಅಂಜಲಿ ನಿಂಬಾಳಕರ ಮಾತನಾಡಿ ನಾನು ಖಾನಾಪುರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ನಿಸ್ವಾರ್ಥತೆಯಿಂದ ಪ್ರಾಮಾಣಿಕವಾಗಿ ಹತ್ತಾರು ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ಸೋಲು ಗೆಲುವಿನ ಆಚೆ ನನ್ನ ಗಮನ ಈ ಭಾಗದ ಜನರ ಕಷ್ಟ ನಷ್ಟ ಅರಿಯುವತ್ತ ಸಾಗಿತ್ತು. ಜನಸೇವೆಯ ಚಟುವಟಿಕೆಗಳು ಸದಾಕಾಲ ಮುಂದುವರೆಯುತ್ತವೆ ಎಂದರು.ಕಾಂಗ್ರೆಸ್ ನಾಯಕ ವೀರಕುಮಾರ ಪಾಟೀಲ ಮಾತನಾಡಿ ಪ್ರಬುದ್ಧ & ಸೇವಾಕಾಂಕ್ಷಿ, ಸುಶಿಕ್ಷಿತ ಮಹಿಳೆ ಡಾ. ಅಂಜಲಿ ನಿಂಬಾಳಕರ ಅವರ ಆಯ್ಕೆ ಮಾಡುವುದರಿಂದ ಖಚಿತವಾಗಿ ಕಾಡಿನಿಂದಾವೃತ ಖಾನಾಪುರ ತಾಲೂಕಿನ ಸರ್ವಾಂಗೀಣ ಏಳ್ಗೆಗೆ ಸಹಕಾರಿ ಎಂದರು. ಇಂದಿನ ಖಾನಾಪುರ ತಾಲೂಕಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಚಾಮನ್ನ ಹೊಸಮನಿ, ಲಕ್ಷ್ಮಣ ರಾವ್ ಚಿಂಗಳೆ, ಗೋಪಾಲ ನಾಯಕ, ಅಶೋಕ ಅಂಗಡಿ, ದೇಮಣ್ಣ ಬಸರಿಕಟ್ಟಿ, ಅಡ್ವೋಕೇಟ್ ಎನ್. ಐ. ಕಡೋಲಿ ಸೇರಿದಂತೆ ಪಕ್ಷದ ಇತರ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.