SHARE

ಬೆಳಗಾವಿ: ಜಮ್ಮು ಕಾಶ್ಮೀರದ ಕಟುವಾ ಅತ್ಯಾಚಾರ ಪ್ರಕರಣಕ್ಕೆ ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿ ಕಡುವಾಗಿ ಅಸಮಧಾನ ವ್ಯಕ್ತಪಡಿಸಿದೆ. ಮುಗ್ದ ಬಾಲಕಿ ಮೆಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವಿವಿಧ ಸಂಘಟನೆಗಳ ಒಕ್ಕೂಟ ಇಂದು ವಿರೋಧಿಸಿದವು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ರವಾನಿಸಲಾಯಿತು.

ಮುಗ್ದ ಬಾಲಕಿ ಮೇಲೆ ನಡೆದ ಅತ್ಯಾಚಾರ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ದಲಿತ ಸೇನಾ ಸಂಘಟನೆ ಬೆಂಬಲ ಸೂಚಿಸಿತು. ಆರೀಫ್ ಕಟಗೇರಿ, ಇಮ್ರಾನ್ ಪಿರಜಾದೆ, ಯಾಕೂಬ್ ಪಠಾಣ, ಮುಜಾವರ ಶೇಖ್, ಆರೀಫ್ ಪಠಾಣ, ಇರ್ಷಾದ ಮುಲ್ಲಾ, ಸರ್ಫರಾಜ ಮಕಾನದಾರ ಮತ್ತಿತರರು ಉಪಸ್ಥಿತರಿದ್ದರು.