SHARE

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಹಿಳಾ ಮಣಿಗಳಿಬ್ಬರು ತಮ್ಮ ತಮ್ಮ ರಾಜಕೀಯ ವರ್ಚಸ್ಸು & ಜನಬೆಂಬಲದ ಶಕ್ತಿಪ್ರದರ್ಶನದ ಮೂಲಕ ತಮ್ಮ ನಾಮಪತ್ರ ಇಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿ ರಾಜ್ಯದ ಗಮನ ಸೆಳೆದರು.ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕರ & ಖಾನಾಪುರದಲ್ಲಿ ಡಾ. ಅಂಜಲಿ ನಿಂಬಾಳಕರ ತಮ್ಮ ತಮ್ಮ ಅಪಾರ ಜನಬೆಂಬಲದ ಮಧ್ಯೆ ರೋಡ್ ಶೋ ನಡೆಸಿ ಚುನಾವಣಾ ಅಧಿಕಾರಿಗಳಿಗೆ ನಾಮ ಪತ್ರ ಸಲ್ಲಿಸಿದರು.ಖಾನಾಪುರ: ಅಪ್ಪಟ ಗಾಂಧಿಗಿರಿ ಸ್ಟೈಲನಲ್ಲಿ ಅತ್ತ ಖಾನಾಪುರದಲ್ಲಿ ಡಾ. ಅಂಜಲಿ ನಿಂಬಾಳಕರ ಖಾನಾಪುರದ ರಸ್ತೆಗಳಲ್ಲಿ ರೋಡ್ ಶೋ ನಡೆಸಿ, ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುಥ್ಥಳಿಗೆ ಗೌರವ ಸಲ್ಲಿಸಿ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ ಅವರಿಗೆ ನಾಮಪತ್ರ ಸಲ್ಲಿಸಿದರು.ಬೆಳಗಾವಿ: ಇತ್ತ ಬೆಳಗಾವಿಯಲ್ಲಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಹಾಗೂ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಕ್ಲಬ್ ರಸ್ತೆಯಲ್ಲಿ ರೋಡ ಶೋ ನಡೆಸಿ ಬೆಳಗಾವಿ ತಹಶೀಲ್ದಾರ ಅವರಿಗೆ ತಮ್ಮ ನಾನಪತ್ರ ಸರಿಯಾಗಿ 2:15 ಕ್ಕೆ ಸಲ್ಲಿಸಿದರು.ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ಗಣೇಶನಿಗೆ ತಮ್ಮ ಪೂಜೆ ಸಲ್ಲಿಸಿ ಚೆನ್ನಮ್ಮ ವೃತ್ತದತ್ತ ಚಲಿಸಿದರು. ಚನ್ನಮ್ಮ ವೃತ್ತದ ಗಣೇಶ ಮತ್ತು ರಾಣಿ ಚನ್ನಮ್ಮ ಮೂರ್ತಿಗೆ ವಂದಿಸಿದ ನಂತರ ರ್ಯಾಲಿ ರಿಸಾಲ್ದಾರ ಗಲ್ಲಿಯ ತಹಶೀಲ್ದಾರ ಕಚೇರಿಗೆ ಆಗಮಿಸಿತು.ಕಾಂಗ್ರೆಸ್ ಪಕ್ಷದ ಧ್ವಜ ಹೊತ್ತು ತಮ್ಮ ಅದ್ದೂರಿ ಪ್ರಚಾರದ ಕಾರನಲ್ಲಿ ಜನತೆಯತ್ತ ಕೈ ಬೀಸಿ ಲಕ್ಷ್ಮೀ ಹೆಬ್ಬಾಳಕರ ಗಮನ ಸೆಳೆದರು.