SHARE

ಬೆಳಗಾವಿ: ಮೂಢನಂಬಿಕೆ & ಕಂದಾಚಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಆರಂಭಿಸಿರುವ ಶಾಸಕ ಸತೀಶ ಜಾರಕಿಗೊಳಿ ‘ಅನಿಷ್ಠ ಕಾಲ’ದಲ್ಲಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ವಿಧಾನಸಭಾ ಚುನಾವಣೆಗೆ ‘ರಾಹು’ ಕಾಲದಲ್ಲಿ ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದು,
ನಾಲ್ಕಾರು ದಿನಗಳಿಂದ ಖ್ಯಾತ ಜ್ಯೋತಿಷಿಗಳ ಬಳಿ ವಿಚಾರಿಸಿ ರಾಹುಕಾಲ ಗೊತ್ತುಪಡಿಸಲಾಗಿದೆ. ಶುಭಕಾರ್ಯಗಳಿಗೆ ಯೋಗ್ಯವಲ್ಲದ ಅನಿಷ್ಠ ಕಾಲ ಏಪ್ರಿಲ್ 24 ರ ಮಧ್ಯಾಹ್ನ 3ಕ್ಕೆ ಹುಕ್ಕೇರಿ ತಹಶೀಲ್ದಾರ ಅವರಿಗೆ ನಾನಪತ್ರ ಸಲ್ಲಿಸಲಿದ್ದಾರೆ.