SHARE

ಬೆಳಗಾವಿ/ಖಾನಾಪುರ: ಖಾನಾಪುರ ಕ್ಷೇತ್ರವನ್ನು ಕಳೆದ ಹಲವು ವರ್ಷಗಳಿಂದ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಮಹಾರಾಷ್ಚ್ರ ಏಕೀಕರಣ ಸಮಿತಿ ಸೇರಿದಂತೆ ಹಲವು ವಿರೋಧಿ ಪಕ್ಷಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಈಗ ಅಕ್ಷರಶಃ ನಡುಕ ಹುಟ್ಟಿಸಿದ್ದಾರೆ. ಮತದಾರರನ್ನು ವಾಮ ಮಾರ್ಗದಲ್ಲಿ ತಮ್ಮ ಕಡೆಗೆ ಒಲಿಸಿಕೊಳ್ಳಲು ಪ್ರಯತ್ನ ನಡೆದದ್ದು ವಿಫಲ ಆಗುತ್ತಿದೆ.

ಖಾನಾಪುರ ಪೂರ್ವ ಭಾಗದ ಯುವಕರ ಹಾಗೂ ಹಿರಿಯರ ದಂಡು ಸ್ವಯಂ ಸ್ಪೂರ್ತಿಯಿಂದ ಜಾತಿ, ಭಾಷೆ ಬೇಧ ಭಾವವಿಲ್ಲದೇ ಡಾ.ಅಂಜಲಿ ನಿಂಬಾಳ್ಕರ ಗೆಲುವಿಗೆ ಪಣ ತೊಟ್ಟು ಶ್ರಮಿಸುತಿದ್ದು ಗಮನ ಸೆಳೆದಿದೆ. ಕಳೆದ ಕೆಲ ದಿನಗಳಿಂದ ಕಾಂಗ್ರೆಸ್‌ ನ ಹಿರಿಯರೇ ಕಾರ್ಯಕರ್ತರಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿರುವುದು ಡಾ. ನಿಂಬಾಳಕರ ಗೆಲುವಿನ ಹಾದಿ ಸುಗಮಗೊಳಿಸಿದೆ.

ಖಾನಾಪುರ ತಾಲೂಕಿನ ಇಟಗಿ, ಪಾರಿಶ್ವಾಡ, ಕಕ್ಕೇರಿ ಸೇರಿದಂತೆ ಮತ್ತಿತರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹತ್ತಾರು ಹಳ್ಳಿಯ ಹಿರಿಯ ಕಾಂಗ್ರೆಸ್ಸಿಗರು ಇಂದು ಪಕ್ಷದ ಅಧ್ಯಕ್ಷ ಅಶೋಕ ಅಂಗಡಿ ನಿವಾಸದಲ್ಲಿ ಸಭೆ ಸೇರಿ ಮಹತ್ವದ ನಿರ್ಧಾರ ಕೈಗೊಂಡರು. ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಅಂಗಡಿ, ಪ್ರಚಾರ ಸಮಿತಿ ಅಧ್ಯಕ್ಷ ಎನ್. ವೈ. ಕೋಡೋಳಿ, ಮಡಿವಾಳಪ್ಪ ಗೌಡರ ಪಾಟೀಲ, ಗೌಸ್ ಲಾಲ ಪಟೇಲ್, ಮಾರುತಿ ಅಳವಣಿ, ಬರಮಣ್ಣ, ರುದ್ರಣ್ಣ ತುರಮರಿ, ಜಗದೀಶಗೌಡ ಪಾಟೀಲ, ಶಫೀಕ್ ಖಾಜಿ, ಶಿರಾಜ ಬೀಡಿಕರ, ಮಹಾವೀರ ಪಾಟೀಲ, ಬಶೀರ್ ಅಹ್ಮದ, ನಾಗಪ್ಪ ಈ ಸಭೆಯಲ್ಲಿ ಉಪಸ್ಥಿತರಿದ್ದರು. ಕಾಂಗ್ರೆಸ್ ಪಕ್ಷಕ್ಕೆ ತಾವು ನಿಷ್ಠಾವಂತ ಕಾರ್ಯಕರ್ತರಾಗಿದ್ದು ಡಾ. ಅಂಜಲಿ ನಿಂಬಾಳಕರ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಈ ವೇಳೆ ಭರವಸೆ ನೀಡಿದರು.