SHARE

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರ ಈಗ ಘಟಾನುಘಟಿಗಳ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದ್ದು ಸೋಲು ಗೆಲುವಿನ ಲೆಕ್ಕಚಾರ ಸೃಷ್ಟಿಸಿದೆ. ಕಾಂಗ್ರೆಸನಿಂದ ಲಕ್ಷ್ಮೀ ಹೆಬ್ಬಾಳಕರ, ಬಿಜೆಪಿಯಿಂದ ಸಂಜಯ ಪಾಟೀಲ, ಜೆಡಿಎಸ್ ನಿಂದ ಶಿವನಗೌಡ ಪಾಟೀಲ, ಎಂಇಎಸ್ ನಿಂದ ಮನೋಹರ ಕಿಣೆಕರ & ಸ್ವತಂತ್ರವಾಗಿ ಮೋಹನ ಮೋರೆ ಸ್ಪರ್ಧೆಗಿಳಿದಿದ್ದಾರೆ.ಆದರೆ ಎಲ್ಲ ಐದೂ ಅಭ್ಯರ್ಥಿಗಳು ರಾಜಕೀಯ ವರ್ಚಸ್ಸಿನ, ಜನಬೆಂಬಲ ಹೊಂದಿರುವ ಅಭ್ಯರ್ಥಿಗಳೇ. ಸಂಜಯ ಪಾಟೀಲ ಹಾಲಿ ಶಾಸಕರಾದರೆ, ಲಕ್ಷ್ಮೀ ಹೆಬ್ಬಾಳಕರ ಕಾಂಗ್ರೆಸನ ಮಹಿಳಾ ರಾಜಕಾರಣಿಯಾಗಿ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲುಂಡ ಲಕ್ಷ್ಮೀ ಹೆಬ್ಬಾಳಕರ ಈಗ ಗೆಲ್ಲುವ ಹಾದಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.ಅತೃಪ್ತ ಕಾಂಗ್ರೆಸ್ ನಾಯಕ ಹಾಲಿ ಜೆಡಿಎಸ್ ಅಭ್ಯರ್ಥಿ ಶಿವನಗೌಡ ಪಾಟೀಲ ಎಲ್ಲರಿಗೂ ಪರಿಚಿತ ಪ್ರಭಾವಿ ನಾಯಕ ಜತೆಗೆ ರಾಜಕೀಯ ನೇತಾರ ಸತೀಶ ಜಾರಕಿಹೊಳಿ ಆಶೀರ್ವಾದ ಇರುವ ಅಭ್ಯರ್ಥಿಯಾದ್ದರಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರ ರಣರಂಗವಾಗಿ ಮಾರ್ಪಾಡಾಗಲಿದೆ.