SHARE

ಬೆಳಗಾವಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ, ಹಾಲಿ ಶಾಸಕ ಸತೀಶ ಜಾರಕಿಹೊಳಿ ಇಂದು ಹುಕ್ಕೇರಿಯಲ್ಲಿ ‘ಅನಿಷ್ಠ ಕಾಲ’ ದಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆ ಕಾಲಕ್ಕೆ ವೀರಕುಮಾರ ಪಾಟೀಲ, ಸತೀಶ ಪುತ್ರಿ ಪ್ರಿಯಾಂಕ ಸತೀಶ ಜಾರಕಿಹೊಳಿ ಸೇರಿ ಇತರ ಐವರು ಹಾಜರಿದ್ದರು. ಚುನಾವಣಾಧಿಕಾರಿ ಕವಿತಾ ಯೋಗಪ್ಪನವರ ನಾಮಪತ್ರ ಸ್ವೀಕರಿಸಿದರು.

ಛೀ..ಅನಿಷ್ಠ ಎನ್ನುವ ‘ರಾಹು’ ಕಾಲದಲ್ಲೇ ಸತೀಶ ಜಾರಕಿಹೊಳಿ ನಾಮಪತ್ರ ಸಲ್ಲುಸಿದ್ದು, ರಾಹು ಒಲಿಯುವನೇ ಇಲ್ಲ ಬೀಳುಸುವನೆ ಕಾಯ್ದು ನೋಡುವ ತವಕದಲ್ಲಿದ್ದಾರೆ ಸಾರ್ವಜನಿಕರು. ಪ್ರಬಲ ಪ್ರತಿಸ್ಪರ್ಧಿಗಳು ಯಮಕನಮರಡಿ ಕ್ಷೇತ್ರ ಕಣದಲ್ಲಿ ಇಲ್ಲದೇ ಇರುವುದರಿಂದ ಸತೀಶ ಜಾರಕಿಹೊಳಿ ‘one way’ ಆಗಿದೆ ಎಂಬ ವ್ಯಾಝ್ಯಾನದ ಮಧ್ಯೆ ಸತೀಶ ರಾಹುಕಾಲ ಆಯ್ದುಕೊಂಡಿರುವುದು ಸ್ಪಷ್ಠವಾಗಿದೆ. ಪೈಪೋಟಿ ನೀಡಬಲ್ಲ ಅಭ್ಯರ್ಥಿ ಕಣದಲ್ಲಿದ್ದರೆ ಅವರು ‘ರಾಹು’ ಕಾಲ ಆಯ್ಕೆ ಮಾಡಿಕೊಳ್ಳುತ್ತಿದ್ದರೆ ಎಂಬ ಪ್ರಶ್ನಾರ್ಥಕ ಚರ್ಚೆ ನಡೆದಿದೆ. ಪ್ರಬಲ ಪ್ರತಿಸ್ಪರ್ಧಿ ಇಲ್ಲದಿದ್ದರೆ ಯಾವ ಕಾಲದಲ್ಲಿ ತುಂಬುದರೆ ಏನಾಗುತ್ತದೆ ಸ್ವಾಮಿ ಎನ್ನುತ್ತಿದ್ದಾರೆ ಜನ. ಸತೀಶ ಜಾರಜಿಹೊಳಿ ಎದುರು ಬಿಜೆಪಿ ಅಭ್ಯರ್ಥಿ ಸ್ವತಃ ‘ಮಾರುತಿ’ ಅಷ್ಠಗಿ ಈ ಸಲವೂ ಕಣಕ್ಕಿಳಿದಿದ್ದರಿಂದ ‘ರಾಹು’ ಮಾರುತಿಗೇನು ತಟ್ಟಲಾರ ಎಂಬ ವಿನೋದ ವ್ಯಕ್ತವಾಗಿದೆ.