SHARE

ಬೆಳಗಾವಿ: ಅಭ್ಯರ್ಥಿಯೊಬ್ಬನಿಗೆ ‘ಬಿ’ ಫಾರ್ಮ ಕೊಟ್ಟು, ಆತ ನಾಮಪತ್ರ ಸಲ್ಲಿಸಿದ ಮೇಲೆ ಮತ್ತೊಬ್ಬ ಅಭ್ಯರ್ಥಿಗೆ ‘ಸಿ’ ಫಾರ್ಮ ಕೊಟ್ಟರೆ ಹೇಗಿರಬೇಡ…!? ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ನಿಂದ ನಿನ್ನೆ ಧರ್ಮರಾಜ ತಮ್ಮ ನಾಮಪತ್ರ ಸಲ್ಲಿಸಿ ಜೆಡುಎಸ್ ಅಧಿಕೃತ ಅಭ್ಯರ್ಥಿಯಾಗಿದ್ದರು. ಆದರೆ ಇದ್ದಕ್ಕಿದ್ದಂತೆ ಇಂದು ಅದೇ ಕ್ಷೇತ್ರಕ್ಕೆ ಅಶ್ಫಾಕ ಮೆಡಕಿ ಅವರಿಗೆ ಜೆಡಿಎಸ್ ‘ಸಿ’ ಫಾರ್ಮ ನೀಡಲಾಗಿದೆ.ಬೆಳಗಾವಿ ಉತ್ತರ ಕ್ಷೇತ್ರದ ಮತದಾರರು & ಕಾರ್ಯಕರ್ತರು ಈಗ ತೀವೃ ಗೊಂದಲಕ್ಕೆ ಒಳಗಾಗಿದ್ದಾರೆ. ಸಿ ಫಾರ್ಮ ಬಿ ಫಾರ್ಮಗಿಂತ ಹೆಚ್ಚು ಅಧಿಕೃತ ಟಿಕೇಟ್ ಎನ್ನಲಾಗುತ್ತದೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸಹ ಜೆಡಿಎಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿ ಕುತೂಹಲ ಮೂಡಿಸಿದ್ದಾರೆ. ಜೆಡಿಎಸ್​ನ ಹಿರಿಯ ಮುಖಂಡ ಗುರುರಾಜ್ ಹುನಸಿನಮರದ ಅವರು ತಮ್ಮ ಪಕ್ಷದ ‘ಬಿ’ ಫಾರ್ಮ್ ನಿಂದ ನಾಮ ಪತ್ರ ಸಲ್ಲಿಸಿದರೆ, ಅದೇ ಪಕ್ಷದಿಂದ ಇನ್ನೊಬ್ಬ ಮಹಾನಗರ ಪಾಲಿಕೆ ಜೆಡಿಎಸ್ ಸದಸ್ಯ ಅಲ್ತಾಫ್ ಕಿತ್ತೂರ ಅವರು ತಮ್ಮ ಪಕ್ಷದ ‘ಸಿ’ ಫಾರ್ಮ್ ಮೂಲಕ ನಾಮ ಪತ್ರ ಸಲ್ಲಿಸಿದ್ದಾರೆ.