SHARE

ಬೆಳಗಾವಿ: ಎಂಇಎಸ್ ಮುಖಂಡ, ಹಾಲಿ ದಕ್ಷಿಣ ಶಾಸಕ ಸಂಭಾಜಿ ಪಾಟೀಲ ಈಗ ತಮ್ಮ ಕ್ಷೇತ್ರವನ್ನೇ ಬದಲಾಯಿಸಿದ್ದು, ಕೊನೆಯದಿನ ಇಂದು ಉತ್ತರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದರು. ಕೊಠಡಿ ಕ್ಷೇತ್ರ ಸಂಖ್ಯೆ 11ರಲ್ಲಿ ಚುನಾವಣಾಧಿಕಾರಿ ಪಿ. ಎನ್. ಲೊಕೇಶ ಅವರಿಗೆ ನಾಮಪತ್ರ ಸಲ್ಲಿಸಿದರು.ಕಾಂಗ್ರೆಸನ ಫಿರೋಜ್ ಸೇಠ್ ಮತ್ತು ಬಿಜೆಪಿಯ ಅನಿಲ ಬೆನಕೆ ನಡುವೆ ತುರುಸಿನ ಸ್ಪರ್ಧೇ ಎಂದು ವ್ಯಾಖ್ಯಾನಿಸುತ್ತಿದ್ದ ವೇಳೆಯೇ, ಇಬ್ಬರಿಗೂ ಟಾಂಗ್ ನೀಡುವ ಮತ್ತೊಬ್ಬ ಪ್ರಭಾವಿ ಈಗ ಉತ್ತರದಲ್ಲಿ ಇಳಿದಂತಾಗಿದೆ. ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ಸಂಭಾಜಿ ಪಾಟೀಲ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.