SHARE

ಬೆಳಗಾವಿ: ವ್ಯಾಪಕ ಮತದಾನ ಆಗುವಂತೆ ನೋಡಿಕೊಳ್ಳಲು ಸಾರ್ವಜನಿಕ ಪ್ರಚಾರ ಮತ್ತು ತಿಳಿವಳಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ sveep ಸಮಿತಿ ಅಧ್ಯಕ್ಷ ಆರ್‌. ರಾಮಚಂದ್ರನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಂದು ಜಿಪಂ. ಸಭಾಭವನದಲ್ಕಿ ನಡೆದ 3ನೇ ಸ್ವೀಪ್ ಸಮಿತಿ ಸಭೆಯಲ್ಲಿ ಎಲ್ಲ ಸರಕಾರಿ ಸ್ಥಳಿಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಚುನಾವಣಾ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಆರ್. ರಾಮಚಂದ್ರನ್ ಮೇ. 12ರಂದು ನಡೆಯುವ ಮತದಾನಕ್ಜೆ ಇನ್ನೇನು 15 ದಿನ ಬಾಕಿ ಇದ್ದು ಜನಸಾಮಾನ್ಯರಗೆ ಕಡ್ಡಾಯ ಮತದಾನ ಮಾಡಿಸಲು & EVM-vvpat ಯಂತ್ರಗಳ ಬಳಕೆಯ ವಿಶ್ವಾಸಾರ್ಹತೆಯ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬಸ್ & ರೈಲ್ವೇ ಟಿಕೇಟಗಳ ಮೇಲೆ ಮತದಾನ ಜಾಗೃತಿ ಬರಹಗಳ ಮುದ್ರಣ, ಮತದಾನ ಜಾಗೃತಿಗಾಗಿ ಕ್ರಿಕೇಟ್ ಮ್ಯಾಚ್ ಆಯೋಜನೆ, ಸ್ಕೇಟಿಂಗ್ ಪಂದ್ಯ, ಕ್ಯಾಂಡಲ್ ರ್ಯಾಲಿ, ಬಸ್ ನಿಲ್ದಾಣ ಮತ್ತು ಆಟೊ ನಿಲ್ದಾಣಗಳಲ್ಲಿ ಜಾಗೃತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು & ಗ್ರಾಪಂ. ಗಳಲ್ಲಿ ತಮಟೆ ಮೂಲಕ ಮತದಾನ ಮಾಡುವಂತೆ ಗ್ರಾಮಸ್ಥರ ಗಮನ ಸೆಳೆಯುವ ಹತ್ತು ಹಲವು ಆಯಾಮಗಳನ್ನು ಬಳಸುವಂತೆ ಸಿಇಓ ಆರ್. ರಾಮಚಂದ್ರನ್ ಅಧಿಕಾರಿಗಳಿಗೆ ಕರೆ ನೀಡಿದರು. ಜಿಪಂ. ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಅಲ್ಪಸಂಖ್ಯಾತ ಇಲಾಖೆ DO ಪುಂಡಲೀಕ ಅನವಾಲ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.