SHARE

ಬೆಳಗಾವಿ: ಖಾನಾಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ‍ಅವರು ಇಂದು ಪಾರಿಶ್ವಾಡ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪಂಚ ಕಲ್ಯಾಣ ಪ್ರಾಣ ಪ್ರತಿಷ್ಥಾನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾನೇಶ್ವರ ಮಹಾರಾಜರ ಆಶೀರ್ವಾದ ಪಡೆದರು. ಪರಮ ಪೂಜ್ಯ ಸಮ್ಯಕ್ತ ಶಿರೋಮಣಿ ಆಚಾರ್ಯ ಶ್ರೀ. 108ನೇ ಜಾನೇಶ್ವರ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ನೂತನ ಮಹಾವೀರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹೊಸ ಕಟ್ಟಡ ನಿರ್ಮಾಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭ ನೆರೆದಿದ್ದ ನೂರಾರು ಜೈನ ಸಮೂದಾಯದ ಭಕ್ತರು ಸಮ್ಯಕ್ತ ಶಿರೋಮಣಿ ಆಚಾರ್ಯ ಶ್ರೀ. 108ನೇ ಜಾನೇಶ್ವರ ಮಹಾರಾಜರ ಆಶೀರ್ವಾದ ಪಡೆದರು.ಜೈನ ಮನಿಗಳು ವಿಶೇಷವಾಗಿ ಆಶೀರ್ವದಿಸಿದ ತೆಂಗಿನಕಾಯಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ ಅ‍ವರಿಗೆ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಕಮಿಟಿ (ಪಟ್ಟಣ) ಅಧ್ಯಕ್ಷ ಆಶೋಕ ಅಂಗಡಿ, ಪ್ರಾಥಮಿಕ ಕೃಷಿಪತ್ತಿನ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ವಾಲಿ, ಬಾಬು ಕಂಚಿ, ವಿಮಲಾ ಹೊಸಕೇರಿ ಮತ್ತಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಂತರ ಖಾನಾಪುರ ಪಟ್ಟಣಕ್ಕೆ ಆಗಮಿಸಿದ ಡಾ.ಅಂಜಲಿ ಹೇಮಂತ ನಿಂಬಾಳ್ಕರ್ ಅ‍ವರು ಸ್ವಾಮಿ ಸಮರ್ಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.