SHARE

ಬೆಳಗಾವಿ: ಕೊನೆಗೂ ಕಮಿಷ್ನರ್ ಡಾ. ಡಿ. ಸಿ. ರಾಜಪ್ಪ ನಾಳೆ ಬೆಳಗಾವಿ ನಗರ ಜವಾಬ್ದಾರಿಯಿಂದ ಬಿಡುಗಡೆ ಆಗಲಿದ್ದು, ಹೊಸ ಕಮಿಷ್ನರ್ ಆಗಿ ಐಜಿಪಿ ಎಂ. ಚಂದ್ರಶೇಖರ್ ನಾಳೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಾರದ ಹಿಂದೆ ವರ್ಗಾವಣೆ ಆದೇಶವಾಗಿದ್ದರೂ ಮೊಮೆಂಟ್ ಆದೇಶ ಬಾರದ್ದರಿಂದ & ಹೊಸ ಕಮಿಷ್ನರ್ ಬರುವಲ್ಲಿ ಆದ ತಡದಿಂದ ವ್ಯತ್ಯಯವಾಗಿತ್ತು.

1998 ನೇ ತಂಡದ ನೇರ ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಮೇಲೆ ವ್ಯವಸ್ಥಿತ ಚುನಾವಣೆ ನಡೆಸುವ ಜವಾಬ್ದಾರಿ ಇದೆ. ಚುನಾವಣೆ ಮುಗಿಯುವವರೆಗೂ ಡಾ. ಡಿ. ಸಿ. ರಾಜಪ್ಪ ರಾಜ್ಯ ರೈಲ್ವೇ ಡಿಐಜಿ ಆಗಿ ಸೇವೆ ಸಲ್ಲಿಸಿ ಮತ್ತೆ ಕಮಿಷ್ನರ್ ಆಗಿ ಚುನಾವಣೆ ನಂತರ ಬೆಳಗಾವಿಗೆ ಹಿಂದಿರುಗಲಿದ್ದಾರೆ.