SHARE

ಬೆಳಗಾವಿ: ಬಡವರ ಏಳ್ಗೇ ಚಿಂತನೆಯ ಕಾಂಗ್ರೆಸ್ ಪಕ್ಷಕ್ಕೆ ಜನತೆ ಬೆಂಬಲ ಸೂಚಿಸಿ ಅಧಿಕಾರ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಖಾನಾಪುರ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ಪರವಾಗಿ ಮಾಡಿದ ಮನವಿ ಸಂಚಲನ ಮೂಡಿಸಿದೆ.ಖಾನಾಪುರ ದಲ್ಲಿ ‘ಕೈ’ ಬಲಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಕಣಬದ್ದರಾಗಿದ್ದು ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿನ ಬಗ್ಗೆ ಸೇರಿದ್ದ ಸಾವಿರಾರು ಜನಸ್ತೋಮಕ್ಕೆ ಮಾಡಿದ ಮನವಿಗೆ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಸ್ವತಃ ಮುಖ್ಯಮಂತ್ರಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಲು ಮಾಡಿದ ಭಾಷಣಕ್ಕೆ ಜನ ತಲೆದೂಗಿದ್ಧಾರೆ.