SHARE

ಬೆಳಗಾವಿ: ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ನಡೆಯಲಿದೆ ಎಂದು ಬಹುಜನ ಸಮಾಜ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಬುದ್ದಾನಂದ ತಿಳಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತರು, ಹಿಂದುಳಿದವರು ಹಾಗೂ ಮುಸ್ಲಿಂರ ನೆನಪು ಬರೀ ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸಗೆ ನೆನಪು ಬರುತ್ತದೆ. ದಲಿತರು, ಮುಸ್ಲಿಂರು ಹಾಗೂ ಹಿಂದುಳಿದವರ ಓಟ್ ಅನ್ನು ತಮ್ಮ ಅಧಿಕಾರಕ್ಕಾಗಿ ಮಾತ್ರ ಬೇಕು ಎಂಬಂತೆ ರಾಜಕೀಯ ಪಕ್ಷಗಳು ಮತ್ತು ಕಾಂಗ್ರೆಸ್ ಬಳಕೆ ಮಾಡುತ್ತ ಬಂದಿವೆ. ಸಿಎಂ ಸಿದ್ದರಾಮಯ್ಯ ೫ ವರ್ಷ ಅಧಿಕಾರ ಕಳೆದರೂ ರಾಜ್ಯದಲ್ಲಿ ಬ್ಯಾಕಲಾಗ್ ಹುದ್ದೆಗಳನ್ನು ತುಂಬಲಿಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂಸತ್ತಿಗೆ ಆಯ್ಕೆಯಾಗದಂತೆ ಇದೇ ಕಾಂಗ್ರೆಸ್ ಅಂದೇ ನೋಡಿಕೊಂಡಿತ್ತು ಎಂದು ಬುದ್ಧಾನಂದ ಸ್ವಾಮಿಜಿ ತಿಳಿಸಿದರು.

ಎಸ್ ಸಿ & ಎಸ್ ಟಿ ಜನಾಂಗ ರಾಜ್ಯಾದ್ಯಂತ ಸಾಮಾಜಿಕ ಕಳಕಳಿಯ ಅಭ್ಯರ್ಥಿಗೆ ತಮ್ಮ ಮತ ಹಾಕಬೇಕು ಎಂದು ಬುದ್ದಾನಂದ ಸ್ವಾಮೀಜಿ ಕರೆ ನೀಡಿದರು. ಸಿಎಂ ಸಿದ್ದರಾಮಯ್ಯಗೆ ನಿಜವಾಗಿಯೂ ಆತ್ಮವಿಶ್ವಾಸ ಇದ್ದರೆ ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಏಕೆ ನಿಲ್ಲಬೇಕಾಗಿತ್ತು ಎಂದು ಪ್ರಶ್ನಿಸಿದರು. ಶೋಷಿತ ವರ್ಗಗಳ ವಿರೋಧಿ ಕಾಂಗ್ರೆಸ್ ಸರಕಾರವನ್ನು ಚುನಾವಣೆಯಲ್ಲಿ ದಲಿತ, ಹಿಂದುಳಿದ ಹಾಗೂ ಮುಸ್ಲಿಂ ವರ್ಗಗಳು ದೂರ ಇಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು.

ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಮಾತನಾಡಿ ರಾಜ್ಯದ ಖಜಾನೆಯ ಹಣ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಕೊಳ್ಳೆ ಹೊಡೆದಿದೆ. ಭೂಗಳ್ಳರು, ಅಕ್ರಮ ದಂಧೆ ಮಾಡುವವರು, ಸೀಮೆ ಎಣ್ಣೆ ಮಾರುವವರು, ಭುಜಭಲದ ದುಂಡಾವರ್ತಿಗಳೇ ಸರಕಾರದಲ್ಲಿ ಅಧಿಕಾರ ಅನುಭವಿಸಿದ್ದಾರೆ.

ಡಿಕೆಶಿ ಮನೆ ಮೇಲೆ IT ದಾಳಿ ಮಾಡಿಸಿದ್ದ ಸಿಎಂ ಸಿದ್ದರಾಮಯ್ಯ: ಸಿಎಂ ಸಿದ್ದರಾಮಯ್ಯ ಒಳ ಒಪ್ಪಂದದ ಮೇರೆಗೆ ಡಿ. ಕೆ. ಶಿವಕುಮಾರ ಮನೆ ಮೇಲೆ ದಾಳಿ ಮಾಡಲಾಗಿತ್ತು ಎಂದು ಶಂಕರ ಮುನವಳ್ಳಿ ಆರೋಪಿಸಿದರು.
ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ & ಶಾಸಕ ಫಿರೋಜ್ ಸೇಠ್ ಒಡೆತನದ ಕಟ್ಟಡಗಳಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ಕರ್ತವ್ಯ ನಿರ್ವಹಿಸುವುದೇಕೆ. ಅವರಿಗೆ ಬೇರೆ ಕಟ್ಟಡ ಬಾಡಿಗೆ ಸಿಗಲಿಲ್ಲವೇ? ಬಿಜೆಪಿ ಸಖ್ಯ ಸಾಧಿಸಿ ಆದಾಯ ತೆರಿಗೆ ಅಧಿಕಾರಿಗಳ ಸಂಪರ್ಕ ಪಡೆದ ಸಿಎಂ ಸಿದ್ದರಾಮಯ್ಯ, ಸಚಿವ ಡಿ. ಕೆ. ಶಿವಕುಮಾರ ಮನೆ ಮೇಲೆ ಈ ಹಿಂದೆ ಐಟಿ ದಾಳಿ ಮಾಡಿಸಿದ್ದಾರೆ ಎಂದು ಶಂಕರ ಮುನವಳ್ಳಿ ಆರೋಪಿಸಿದರು. ಬಿಜೆಪಿ & ಜೆಡಿಎಸ್ ಹಾಗೂ ಆರ್ ಎಸ್ ಎಸ್ ಹಿನ್ನೆಲೆಯ ಜನ ಇಂದು ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಬಾಬುಲಾಲ ಬಾಗವಾನ, ದತ್ತಾ ಬಿಲಾವರ, ಸದಾ ಕೋಲಕಾರ, ಜಯರಾಮ ಉಪಸ್ಥಿತರಿದ್ದರು.