SHARE

ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಭಾವಿ MLA ಎಂದೇ ಜನಬೆಂಬಲ ಗಿಟ್ಟಿಸಿಕೊಳ್ಳುತ್ತಿರುವ ಅಭ್ಯರ್ಥಿ ಅನಿಲ ಬೆನಕೆ ತಮ್ಮ ಅದ್ದೂರಿ ಪ್ರಚಾರ ಮುಂದುವರೆಸಿದರು.ಇಂದು ವಿನಾಯಕ ನಗರ ಹಿಂಡಲಗಾ ಗಣಪತಿ ದೇವಸ್ಥಾನದಿಂದ ಪ್ರಾರಂಭವಾದ ಬಿಜೆಪಿ ಪ್ರಚಾರ ಯಾತ್ರೆ ಸೈನಿಕ ನಗರ, ಜಯ ನಗರ, ವಿಜಯ ನಗರ, ಬುಡಾ ಲೇಔಟ್, ಭಾತಖಂಡೆ ಗಲ್ಲಿ, ಭೋವಿ ಗಲ್ಲಿ, ಪಾಂಗುಳ ಗಲ್ಲಿ, ಮೆನಸೆ ಗಲ್ಲಿ, ತೆಂಗಿನಕೇರಿ ಗಲ್ಲಿ, ಆಜಾದ ಗಲ್ಲಿ, ಮಾಳಿ ಗಲ್ಲಿ, ಕಸಾಯಿ ಗಲ್ಲಿ, ಕಾಮತ ಗಲ್ಲಿ, ಹಳೆ ಪಿಬಿ ರಸ್ತೆಗಳಲ್ಲಿ ಸಂಚರಿಸಿತು. ನಗರದ ಹೃದಯಭಾಗದಲ್ಲಿ ಜರುಗಿದ ಪ್ರಚಾರದ ವೇಳೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದ್ದು ಗಮನ ಸೆಳೆಯಿತು.