SHARE

ಬೆಳಗಾವಿ: ಖಾನಾಪುರ ಮತಕ್ಷೇತ್ರದಲ್ಲಿ ದಿನೇ ದಿನೇ ಕಾಂಗ್ರೆಸ್ ಬಲ ವೃದ್ಧಿಯಾಗಿದ್ದು, ತಾಲ್ಲೂಕಿನ ಪ್ರಭಾವಿ ಕಾಂಗ್ರೆಸ್ ನಾಯಕ ರಫೀಕ್ ಖಾನಾಪುರಿ ಅವರ ಸಹೋದರ ರೇಹಮತ್ ವುಲ್ಲಾ ಖಾನಾಪುರಿ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರಿಗೆ ಬೆಂಬಲಕ್ಕೆ ನಿಂತಿರುವುದು ಇದಕ್ಕೆ ಸಾಕ್ಷಿ.ಇದರೊಂದಿಗೆ ಬಿಜೆಪಿ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಮೋಯಿನುದ್ದಿನ್ ಸೇರಿದಂತೆ ಇನ್ನೂ ಹಲವು ಬಿಜೆಪಿ ಕಾರ್ಯಕರ್ತರು ರೇಹಮತ್ ವುಲ್ಲಾ ಖಾನಾಪುರಿಯವರ ನಿವಾಸದಲ್ಲಿ ಸಭೆ ಸೇರಿ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದರು. ಈ ಸಂದರ್ಭ ಮಾತನಾಡಿದ ರೇಹಮತ್ತುಲ್ಲಾ ಖಾನಾಪುರಿ ತಮ್ಮ ಸಹೋದರ ರಫೀಕ್ ಖಾನಾಪುರಿಯವರ ಕಾಂಗ್ರೆಸ್ ಪಕ್ಷಕ್ಕಾಗಿ ತಮ್ಮ ಜೀವನವನ್ನೆ ಮುಡುಪಿಟ್ಟಿದ್ದಾರೆ. ಇಂದಲ್ಲ ನಾಳೆ ಅವರು ಕಾಂಗ್ರೆಸ್ ಪಕ್ಷದ ಪರ ನಿಲ್ಲಲ್ಲಿದ್ದಾರೆ ಅನ್ನೊ ಭರವಸೆ ಇದೆ ಎಂದರು.

ಅನಂತಕುಮಾರ ಹೆಗಡೆ ಅವರ ಅವಹೇಳನಕಾರಿ ಹೇಳಿಕೆಗಳು ನಮ್ಮನ್ನು ಇರುಸು ಮುರಿಸಿಗೆ ಈಡು ಮಾಡಿದೆ. ಜನರ ಭಾವನೆಗಳಿಗೆ ದಕ್ಕೆ ತರುವಂತಹ ಸಮಾಜದ ಸ್ವಾಸ್ತ್ಯ ವನ್ನು ಕದಡುವ ಹೆಗಡೆಯವರ ಚುಚ್ಚು ಮಾತುಗಳಿಂದ ನೊಂದು ತಾವು ಬಿಜೆಪಿ ತೊರೆಯುತ್ತಿರುವುದಾಗಿ ಬಿಜೆಪಿ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಮೋಯಿನ್ನುದ್ದಿನ್ ಹೇಳಿದರು.

ಖಾನಾಪುರದಲ್ಲಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ್ ರವರ ಗೆಲುವು ನಿಶ್ಚಿತವೆಂದು ಈ ಸಂದರ್ಭ ಇವರು ವಿಶ್ವಾಸ ವ್ಯಕ್ತ ಪಡಿಸಿದರು. ಈ ಭೇಟಿಯ ವೇಳೆ ಪ್ರಮುಖರಾದ ಬಷೀರ್ ಅಹಮದ್, ಮುಸ್ತಾಕ್ ಸನದಿ ಮತ್ತಿತರರು ಉಪಸ್ಥಿತರಿದ್ದರು.