SHARE

ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಎನ್. ಎಸ್. ಶಂಕರಾಚಾರ್ಯ ಬಿರುಸಿನ ಪ್ರಚಾರ ನಡೆಸಿದರು. ಧಾಮನೆ, ವಡಗಾವಿ, ಭಾಗ್ಯನಗರ, ಟಿಳಕವಾಡಿ ಪ್ರದೇಶಗಳಲ್ಲಿ ಪ್ರಚಾರ ನಡೆಸಿ, ಮತಭೇಟೆ ನಡೆಸಿದರು. ಜನತೆಯ ನಾಗರಿಕ ಸವಲತ್ತುಗಳ ಬೇಡಿಕೆಗೆ ತಕ್ಕಂತೆ ಜನಪ್ರತಿನಿಧಿಯಾದವನು ಸ್ಪಂದಿಸುವುದು ಆದ್ಯ ಕರ್ತವ್ಯ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಾಸಿಕ ವೇತನ ಹೆಚ್ಚಳ ಮತ್ತು ಸವಲತ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳುವ ಭರವಸೆ ಶಂಕರಾಚಾರ್ಯ ನೀಡಿದ್ದಾರೆ. ಪ್ರಚಾರದಲ್ಲಿ ಮಹಿಳಾ ಮಂಡಳ ಹಾಗೂ ಯುವಕ ಮಂಡಳಗಳು ಭಾಗವಹಿಸಿದ್ದವು.