SHARE

ಬೆಳಗಾವಿ: ಮೇ. 6ರಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬೆಳಗಾವಿ ದಕ್ಷಿಣದಲ್ಲಿ ಬುದ್ದಿಜೀವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಸದ ಸುರೇಶ ಅಂಗಡಿ ಮೇ. 6ರಂದು ಬೆಳಿಗ್ಗೆ 11ಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಅವರ ರೋಡ ಶೋ ನಗರದ ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ನಡೆಯಲಿದೆ.

ಮೇ. 9ರಂದು ಸಂಜೆ 4ಕ್ಕೆ ಬೆಳಗಾವಿಯ ನಗರದ ಡಾ. ಬಿ. ಎಸ್. ಯಡಿಯೂರಪ್ಪ ರಸ್ತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಮತ್ತು ಅಲಾರವಾಡ ಕ್ರಾಸ್ ಬಳಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದರು. ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸುಮಾರು 2ಲಕ್ಷ ಮೇಲ್ಪಟ್ಟು ಜನತೆ ಸೇರುವ ನಿರೀಕ್ಷೆ ಇದೆ ಎಂದರು.

ಬೆಳಗಾವಿ ನಗರ ಅಭಿವೃದ್ಧಿ ಹಣ ಅಕ್ರಮ ಬಡಾವಣೆಗಳಲ್ಲಿ ಬಳಕೆಯಾಗಿದೆ. ಅಧಿಕೃತ ಬಡಾವಣೆಗಳನ್ನು ಅಭಿವೃದ್ಧಿಯಿಂದ ವಂಚಿತರನ್ನಾಗಿ ಮಾಡಿ ನಗರ ಅಭಿವೃದ್ಧಿ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡು ತಿರುಗಾಡುತ್ತಿದೆ ಎಂದು ನಾಯಕ ಎಂ. ಬಿ. ಝಿರಲಿ ಆಕ್ರೋಶ ವ್ಯಕ್ತಪಡಿಸಿದರು.

ಶಂಕರಗೌಡ ಪಾಟೀಲ, ಎಂ. ಬಿ. ಝಿರಲಿ, ರಾಜೇಂದ್ರ ಹರಕುಣಿ, ಬಸವರಾಜ ರೊಟ್ಟಿ ಇತರರು ಉಪಸ್ಥಿತರಿದ್ದರು.