SHARE

ಬೆಳಗಾವಿ: ವಿಧ್ಯೆ ಕಲಿಸಿದ ಗುರು ತನ್ನ ವಿಧ್ಯಾರ್ಥಿಗೆ ₹5000 ಆರ್ಥಿಕ ಸಹಾಯ ನೀಡಿ ‘ಮಡಿಕೆ’ ತುಂಬ ನಿನಗೆ ಮತ ಬರಲಿ ಎಂದು ಹಾರೈಸಿ ಆಶೀರ್ವದಿಸಿದ್ದಾರೆ. ಪ್ರಾಚೀನ(Primitive) ಕಾಲದಲ್ಲಿ ಗುರುವಿಗೆ ದಕ್ಷಿಣೆ ಕೊಡುವ ಸಂಪ್ರದಾಯವಿತ್ತು. ಆದರೆ ‘ದ್ರೋಣಾಚಾರ್ಯರು- ಏಕಲವ್ಯ’ ರ ಗುರು ಶಿಷ್ಯ ಸಾಂಗ್ಯತ್ಯಕ್ಕೆ ವ್ಯತಿರಿಕ್ತವಾಗಿ ಈಗ ದ್ರೋಣಾಚಾರ್ಯರೇ ಏಕಲವ್ಯನಿಗೆ ಧನ ನೀಡಿ ಯಶಸ್ಸು ನಿನ್ನದಾಗಲಿ ಎಂದಿದ್ದಾರೆ.ವಿಧ್ಯೆ ಕಲಿಸಿದ ಗುರು ತನ್ನ ವಿದ್ಯಾರ್ಥಿಯ ಸಾಮಾಜಿಕ ಕೆಲಸ ಕಾರ್ಯಗಳು ಹಾಗೂ ಸಮಾಜದ ಹುಣ್ಣಾಗಿ ಪರಿಣಮಿಸಿರುವ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿದ ತನ್ನ ಆತ್ಮೀಯ ವಿಧ್ಯಾರ್ಥಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ ಮತ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವಿಚಾರ ಮನಗಂಡು ಮನೆಗೆ ಕರೆಸಿ ಅವರ ಚುಣಾವಣೆಗೆ ಆರ್ಥಿಕ ನೆರವು ₹5000 ಚೆಕ್ ನೀಡಿದ್ದಾರೆ.

ಶಿಕ್ಷಕ ಅರುಣ ನಾಜರೆ ಅವರು ತನ್ನ ವಿದ್ಯಾರ್ಥಿ ಸುಜಿತ ಮುಳಗುಂದ ಚಿನ್ಹೆಯಾದ ‘ಮಡಿಕೆ’ಗೆ ತುಂಬಿ ತುಳುಕುವಷ್ಟು ಮತ ಬರಲಿ ಅಂತ ಕೈಲಾದ ಧನ ಸಹಾಯ ನೀಡಿ ಆಶಿರ್ವದಿಸಿ ಗಮನ ಸೆಳೆದಿದ್ದಾರೆ.