SHARE

ಬೆಳಗಾವಿ/ಖಾನಾಪುರ: ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ ಪರ ಪ್ರಚಾರಕ್ಕಾಗಿ ಇಂದು ತಾಲೂಕಿಗೆ ಆಗಮಿಸಿದ್ದ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಬೀಡಿ, ಹಲಶಿ, ನಾಗರಗಾಳಿ, ಗೋದಗೇರಿ, ಗೋದೊಳ್ಳಿ, ಲಿಂಗನಮಠ ಹಾಗೂ ಕಕ್ಕೇರಿ ಗ್ರಾಮಗಳಲ್ಲಿ ಸಂಚರಿಸಿ ಪ್ರಚಾರ ಕೈಗೊಂಡರು.ತಾಲೂಕಿನಲ್ಲಿ ಚುನಾವಣಾ ಕಣದ ಬಿಸಿಯ ಮತ್ತು ತಾಮಪಾನ ಕೂಡ ವಿಪರೀತ ಬೀಸಿಲಿನಿಂದ ಝಳ ತಪತಪಿಸುತ್ತಿದೆ. ಆದರೇ ಇಂದು ತಾಲ್ಲೂಕಿನ ಹಲವೆಡೆ ಸುರಿದ ಭಾರಿ ಮಳೆ ವಾತಾವರಣವನ್ನು ತಂಪುಗೊಳಿಸಿದ್ದು ಕಾರ್ಯಕರ್ತರ ಪಾಲಿಗೆ ನಿರಂತರವಾಗಿ 7 ಗ್ರಾಮಗಳ ಪ್ರಚಾರ ಕಾರ್ಯ ಯಶಸ್ವಿಯಾಗಿ ನಡೆಸಲು ಸಹಾಯಕಾರಿ ಆಗಿತ್ತು.

ನಾಗರಗಾಳಿಯ ಗೋವಾ ಹುಬ್ಬಳ್ಳಿ ರಸ್ತೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ ಮತದಾನ ಅತ್ಯಂತ ಪ್ರಬಲ ಅಸ್ತ್ರ. ಪ್ರಜಾಪ್ರಭುತ್ವದಲ್ಲಿ ಜನಸಾಮಾನ್ಯನಿಗೂ ಒಂದೇ ಮತ, ಪ್ರಧಾನ ಮಂತ್ರಿಗೂ ಒಂದೇ ಮತ. ಇದನ್ನು ಅರ್ಥೈಸಿಕೊಂಡು ಬಡವರ-ಅಶಕ್ತರ ಮಹಿಳೆಯರ ಹಿತಕ್ಕಾಗಿ ದುಡಿಯುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕಾಗಿ ವಿನಂತಿಸಿದರು.ಈ ಸಂದರ್ಭದಲ್ಲಿ ಮಹಾರಾಷ್ಟ್ರ ದ ಮಾಜಿ ಮುಖ್ಯಮಂತ್ರಿ ಅಶೋಕರಾವ್ ಚವಾಣ ಪತ್ನಿ ಶಾಸಕಿ ಅಮಿತಾ ಚವ್ಹಾಣ ಪಕ್ಷದ ಅಧ್ಯಕ್ಷ ಅಶೋಕ್ ಅಂಗಡಿ, ರಂಜಿತ್ ದೇಸಾಯಿ, ಮಧು ಕವಳೇಕರ್ ಮತ್ತಿತರರು ಉಪಸ್ಥಿತರಿದ್ದರು.