SHARE

ಬೆಳಗಾವಿ: ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ‘ಕಾಂಗ್ರೆಸ್’ ಆಡಳಿತಾವಧಿಯಲ್ಲಿ ಬದಲಾವಣೆಯ ಪರ್ವ ಆರಂಭಗೊಳ್ಳುವುದು ಖಾನಾಪುರ ಕ್ಷೇತ್ರದ ಜನತೆಗೆ ಖಂಡಿತವಾಗಿದೆ.ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿ ಈಗ ಖಾನಾಪುರ ಕ್ಷೇತ್ರದಲ್ಲಿ ಡಾ. ಅಂಜಲಿ ನಿಂಬಾಳ್ಕರ ಗೆಲವು ಬಹುತೇಕ ಖಚಿತವಾಗಿದೆ ಎಂಬ ದಟ್ಟ ಚರ್ಚೆ ಗರಿಗೆದರಿದೆ. ಖಾನಾಪುರ ಕ್ಷೇತ್ರದ ರಾಜಕೀಯ ಇತಿಹಾಸದಲ್ಲೇ ಕಾಂಗ್ರೆಸ್ ಕೇವಲ ಒಂದೇ ಒಂದು ಬಾರಿ ಆಡಳಿತ ನಡೆಸಿದ್ದು, ಮತ್ತೆ ಈ ಭಾರಿ ಕಾಂಗ್ರೆಸ್ ವಿಜಯಪತಾಕೆ ಹಾರಿಸಿ ಹೊಸ ಇತಿಹಾಸ ರಚಿಸುವುದು ನೂರಕ್ಕೆ ನೂರುರ್ರೀ… ಎನ್ನುತ್ತಿದ್ದಾರೆ ಜನ.1952ರಲ್ಲಿ ಕಾಂಗ್ರೆಸ್‍ನ ಅರಗಾವಿ ಬಸಪ್ಪ ಸಿದ್ಧಲಿಂಗಪ್ಪ ಖಾನಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್ ಅಭ್ಯರ್ಥಿ. ತದ ನಂತರ ಕಾಂಗ್ರೆಸ್ ಪಕ್ಷ ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿದ್ದರೂ ಅದನ್ನು 6 ಜಿಲ್ಲಾ ಪಂಚಾಯತಿ ಕ್ಷೇತ್ರ ಒಳಗೊಂಡ ಪ್ರದೇಶದ ಮನೆ-ಮನೆಗೆ ತೆರಳಿ ಜನರ ಮನಮುಟ್ಟುವ ಕೆಲಸ ಮಾತ್ರ ಯಾವೊಬ್ಬ ಕಾಂಗ್ರೆಸ್ ನಾಯಕರು ಈ ಮಟ್ಟಕ್ಕೆ ಮಾಡಿರಲಿಲ್ಲ ಎನ್ನುವುದು ಗಮನಾರ್ಹ.

ತಾಲೂಕಿನ ಮಹಿಳೆಯರ ಪಾಲಿಗೆ ಡಾ.ಅಂಜಲಿ ನಿಂಬಾಳಕರ ಮನೆಯ ಮಗಳಾಗಿದ್ದು ಜನರೊಂದಿಗಿನ ಒಡನಾಟದ ಪರಿ ಅವರನ್ನು ಜನರ ಹತ್ತಿರಕ್ಕೆ ತಂದಿದೆ. ವೈಭವೋಪೇತ ಜೀವನ ಶೈಲಿಯ ಆಚೆ ಸಾಮಾನ್ಯರಲ್ಲಿ ಅತಿ ಸಾಮಾನ್ಯಳಾಗಿ ಜನರೊಂದಿಗೆ ಬೆರೆಯುವ ಡಾ. ಅಂಜಲಿ ನಿಂಬಾಳಕರ ಸೇವೆ ಮತ್ತು ಸೇವೆಯ ಪರಿ ಜನಮನ ಸೆಳೆದಿದೆ.