SHARE

ಬೆಳಗಾವಿ: ಅಸಾವುದ್ದೀನ್ ಓವೈಸಿ ಅವರ ಯಾವ ಅಂಗಡಿಯಿಂದ ಬಂದಿದ್ದಾರೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ಗುಲಾಂ ನಬಿ ಆಜಾದ್ ಮರು ಪ್ರಶ್ನಿಸಿದ್ದಾರೆ. ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಓವೈಸಿ ಅವರು ಕೇಂದ್ರದಲ್ಲಿ ಬಿಜೆಪಿ ತ್ರಿವಳಿ ತಲಾಕ್ ಮಸೂದೆ ಜಾರಿ ಮಾಡುವ ಸಂದರ್ಭ ‘ಕಾಂಗ್ರೆಸ್’ ನ ಯಾವ ಹಿರಿಯ ಮುಖಂಡರು ‘ಚ’ಕಾರ ಎತ್ತಲಿಲ್ಲ ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರಿಸಿದ ಗುಲಾಂ ನಭಿ ಆಜಾಧ್ ಅವರ ಪ್ರಶ್ನೆಗೆ ನಾನು ಉತ್ತರ ಕೊಡಬೇಕೆ ಎಂದು ತಳ್ಳಿ ಹಾಕಿದರು.

ಮೋದಿ ಅಧಿಕಾರಕ್ಕೆ ಬರುವ ಮುನ್ನ ಕೊಟ್ಟ ಎಲ್ಲ ಆಶ್ವಾಸನೆಗಳನ್ನು ಹುಸಿ ಮಾಡಿದ್ದಾರೆ. ಸಂಸತ್ತು ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸದೇ ಹೊರಬಂದು ಕಾಂಗ್ರೆಸ್ ವಿರುದ್ದ ಮಾತಾಡುತ್ತಾರೆ, ಜ‌ನರಿಗೆ ಮೋದಿ ಅವರ ನಿಜ ಬಣ್ಣ ಗೊತ್ತಿಲ್ಲವೇ ಎಂದು ಗೇಲಿ ಮಾಡಿದರು. ಬಿಜೆಪಿ ತನ್ನ ನಾಲ್ಕು ವರ್ಷದ ಹಿಂದಿನ ಭರವಸೆಯನ್ನೇ ಇನ್ನೂ ಪೂರ್ಣಗೊಳಿಸಿಲ್ಲ. ಬಿಜೆಪಿ ಹಾಗೂ ವಿಶೇಷವಾಗಿ ಪ್ರಧಾನಿ ಮೋದಿ ಬಗ್ಗೆ ಜನತೆ ಅಸಮಾಧಾನ ಹೊಂದಿದ್ದಾರೆ.

ಮತದಾನ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಿನ ಜನ ಬಡವರಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ,
ಜನದನ್ ಯೋಜನೆಯ ಬಗ್ಗೆಯೇ ಮಾತುಗಳನ್ನು ಜನ ಆಡುತ್ತಿದ್ದಾರೆ. ಪ್ರತಿ ಅಕೌಂಟಗೆ ₹15 ಲಕ್ಷ ಹಣ ಹಾಕುವ ಉದ್ದೇಶದಿಂದ ಖಾತೆ ನಿರ್ಮಾಣ‌ ಮಾಡಿಸಿದ್ದಾರೆ. ಆದರೆ ‘ನಮೋ’ ಜನರಿಗೆ ದೊಡ್ಡ ದೋಖಾ ಮಾಡಿದ್ದಾರೆ ಎಂದರು.

ವೀರಣ್ಣ ಮತ್ತಿಕಟ್ಟಿ, ವಿನಯ ನಾವಲಗಟ್ಟಿ, ಫಿರೋಜ್ ಸೇಠ್, ರಾಜು ಸೇಠ್, ಪಿ. ಮೋಹನ ಇತರರು ಉಪಸ್ಥಿತರಿದ್ದರು.