SHARE

ಬೆಳಗಾವಿ: ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಉತ್ತರ ಕ್ಷೇತ್ರದ ಅಭ್ಯರ್ಥಿ ಫಿರೋಜ್ ಸೇಠ್ ಪರವಾಗಿ ಭರ್ಜರಿ ಪ್ರಚಾರ ಆರಂಭಿಸಿದರು.ಮಂಗಳವಾರ ನಗರದ ಉಜ್ವಲ ನಗರ, ಆಜಾದ್ ನಗರ ಪ್ರದೇಶದಲ್ಲಿ ಮನೆ ಮನೆ ಮತಯಾಚನೆ ನಡೆಸಿದ ಗುಲಾಂ ನಬಿ ಆಜಾದ್ ಮತ್ತು ಫಿರೋಜ್ ಸೇಠ್ ಕೇಂದ್ರ ಸರಕಾರದ ಜನವಿರೋಧಿ ಆಡಳಿತದ ಬಗ್ಗೆ ಜನತೆಯ ಗಮನ ಸೆಳೆದರು.ಕೇಂದ್ರ ಸರಕಾರದ ಸುಳ್ಳು ಆಶ್ವಾಸನೆಗಳು, ದಿನನಿತ್ಯ ಅಗತ್ಯದ ವಸ್ತುಗಳ ಭಾರಿ ಬೆಲೆ ಏರಿಕೆ, ಪೆಟ್ರೋಲ್ ಡೀಸಲ್ ಬೆಲೆ ಗಗನಕ್ಕೇರಿರುವುದು, ನಿಲ್ಲದ ಭ್ರಷ್ಟಾಚಾರ, ನೋಟ ಬಂದಿ ಮೂಲಕ ದೇಶದ ಆರ್ಥಿಕತೆ ಹಾಳು ಮಾಡಿರುವುದು ಸೇರಿದಂತೆ ಇತರ ವೈಫಲ್ಯ ಹಾಗೂ ನ್ಯೂನ್ಯತೆಗಳ ಬಗ್ಗೆ ಜನರ ಗಮನ ಸೆಳೆದರು.ಗುಲಾಂ ನಬಿ ಆಜಾದ್ ಮತ್ತು ಫಿರೋಜ್ ಸೇಠ್ ಹಾಗೂ ಇತರ ಕಾಂಗ್ರೆಸ್ ನಾಯಕರನ್ನು ಬರಮಾಡಿಕೊಂಡ ರಹವಾಸಿಗಳು ಸೇಠ್ ಅಭಿವೃದ್ಧಿ ಕಾರ್ಯಗಳನ್ನು ಕೊಂಡಾಡಿ ಮತ ನೀಡುವ ಭರವಸೆ ನೀಡಿದರು.