SHARE

ಬೆಳಗಾವಿ: ಹಾಲಿ ಉತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ್ ಅವರು ಈ ಬಾರಿಯೂ ಭಾರಿ ಬಹುಮತದಿಂದ ಉತ್ತರ ಮತಕ್ಷೇತ್ರದಲ್ಲಿ ಜಯದ ದಾಖಲೆ ನಿರ್ಮಿಸಲಿದ್ದಾರೆ.ಮೋದಿ ಅಲೆ, ಶಾ ಅಲೆಯು ಅವರ ಅಭಿವೃದ್ಧಿ ಪರ ಕಾರ್ಯಗಳೆದುರು ನಡೆಯುದಿಲ್ಲ ಎಂಬುದು ರಾಜಕೀಯ ತಜ್ಞರ ಅಭಿಪ್ರಾಯ ವಾಗಿದೆ. ಅವರ ನೇರ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ಅವರು ಸೋಲನ್ನ ಒಪ್ಪಿದಂತಾಗಿದೆ, ಸೇಠ್ ಅವರು ಪ್ರಚಂಡ ಬಹುಮತದಿಂದ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಜನಮಾನಸದಲ್ಲಿ ಕೆಳಿಬರುತ್ತಿದೆ.ಕಳೆದ ತಮ್ಮ ಅವಧಿಯಲ್ಲಿ ಶಾಸಕ ಫಿರೋಜ್ ಸೇಠ್ ಅವರು ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಸರಕಾರದಿಂದ ಹಚ್ಚಿನ ಪ್ರಮಾಣದಲ್ಲಿ ಅನುದಾನ ತಂದು ಕುಂದಾನಗರಿಯನ್ನು ಸುಂದರ, ಸುಸಜ್ಜಿತಗೊಳಿಸಿದ್ದಾರೆ.ಪ್ರತಿ ಬಡಾವಣೆಯ ಕಷ್ಟ ತೊಂದರೆಗಳಿಗೆ ಸ್ಪಂದಿಸುವ ಶಾಸಕ ಸೇಠ್ ಅವರು ಮುತುವರ್ಜಿ ವಹಿಸಿ ಅವುಗಳಿಗೆ ಪರಿಹಾರವನ್ನು ತಕ್ಷಣ ನೀಡಿ ಜನಮೆಚ್ಚುಗೆ ಪಾತ್ರರಾಗಿದ್ದಾರೆ.ಹಿಂದೂ,ಮುಸ್ಲಿಮ್, ಜೈನ,ಕ್ರೈಸ್ತ ಮತ್ತು ದಲಿತರೆನ್ನದೆ ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರುಗಳ ಸಮಸ್ಯೆಗಳನ್ನು ಆಲಿಸಿ ಆಯಾ ಅಧಿಕಾರಿಗಳಿಗೆ ಫೋನ್ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಜರುಗಿಸುವುದನ್ನು ಮಾಡುತ್ತಾರೆಂದು ಜನಸಾಮಾನ್ಯರು ಮಾತಾಡಿಕೊಳ್ಳುವುದು ಸಾಮಾನ್ಯವಾಗಿದೆ.ರಸ್ತೆ ಅಗಲೀಕರಣ, ವಿದ್ಯುತ್ ಅಲಂಕಾರ, ಕೋಟೆಕೆರೆಯ ಸೌಂದರ್ಯ, ದೇಶದ ಅಭಿಮಾನದ ಪ್ರತೀಕವಾದ ದಾಖಲೆಯ ಎತ್ತರದ ಧ್ವಜಸ್ತಂಭ ಮುಂತಾದವು ಫಿರೋಜ್ ಸೇಠ ಅವರ ಕಾರ್ಯಗಳು ಇವು ಅವರ ವಿಜಯಿ ಆಯ್ಕೆಗೆ ಕಾರಣವಾಗಲಿವೆ ಎಂದು ಹೇಳಲಾಗುತ್ತದೆ.ಅವರ ಕಚೇರಿಗೆ ಸಹಾಯ ಕೋರಿ ಹೋಗುವ ಪ್ರತಿಯೊಬ್ಬರಿಗೂ ನೆರವು ನೀಡುವ ಗುಣ ಪ್ರತಿ ಜಾತಿ ಧರ್ಮದವರು ತಲೆದೂಗುವಂತೆ ಮಾಡಿದೆ ಎಂದು ಹೇಳಲಾಗುತ್ತದೆ. ಸ್ವತಃ ಸ್ವಚ್ಛ, ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಮನೋಭಾವದ ಜಾತ್ಯಾತೀತ ವಿಚಾರದ ಸೇಠ್ ಅವರ ಆಯ್ಕೆ ಖಚಿತ ಎಂದು ಹೇಳಲಾಗುತ್ತಿದೆ.ಸ್ವಚ್ಛ ಪಾರದರ್ಶಕ ಆಡಳಿತ ನೀಡಿದ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಇಂದಿರಾ ಕ್ಯಾಂಟೀನ್, ಅನ್ನಭಾಗ್ಯ, ಕ್ಷೀರ ಭಾಗ್ಯ ದಂತಹ ಬಡವ, ದೀನ, ದಲಿತಪರ ಯೋಜನೆಗಳು ಫಿರೋಜ್ ಸೇಠ್ ಅವರ ಗೆಲುವಿಗೆ ನೆರವಾಗಲಿದೆ. ರೈತರ ಸಾಲಮನ್ನಾ, ರೈತಪರ ಯೋಜನೆಗಳು ಮತಗಳಾಗಿ ಇವರಿಗೆ ಪರಿವರ್ತಿತಗೊಳ್ಳುವುದು ಖಚಿತವೆಂದೆ ಹೇಳಲಾಗುತ್ತಿದೆ. ಹೀಗಾಗಿ ಹಾಲಿಶಾಸಕ ಫಿರೋಜ್ ಸೇಠ್ ಅವರು ಪ್ರಚಂಡ ಬಹುಮತದಿಂದ ಆಯ್ಕೆಗೊಂಡು ಹ್ಯಾಟ್ರಿಕ್ ದಾಖಲೆಯ ಸಾಧನೆ ಮಾಡಲಿದ್ದಾರೆ.