SHARE

ಬೆಳಗಾವಿ: ನಾಳೆ ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಮಸ್ತ ತಯಾರಿ ಮಾಡಿಕೊಂಡಿದ್ದು ಶನಿವಾರ ಬೆಳುಗ್ಗೆ 7AM ರಿಂದ ಸಂಜೆ 6PM ರವರೆಗೆ ನಡೆಯಲಿದೆ. ಇಂದು ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ & ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಮತದಾನಪೂರ್ವ ಅಗತ್ಯ ಸಿದ್ದತೆಗಳ ಮಾಹಿತಿ ನೀಡಿದರು.ಜಿಲ್ಲೆಯ ೧೮ ಮತಕ್ಷೇತ್ರಗಳಲ್ಲಿ ಒಟ್ಟು 37,37,887 ಮತದಾರರಿದ್ದು, ಅದರಲ್ಲಿ 18,88,415 ಪುರುಷರು, 18,34,894 ಮಹಿಳೆಯರು ಇತರೆ ವರ್ಗದವರು 276 & ಸೇವಾಮತದಾರರು 14, 302 ಇದ್ದಾರೆ. 24,650 ವಿಶೇಷ ಚೇತನ ಮತದಾರರಿದ್ದು ಜಿಲ್ಲೆಯಲ್ಲಿ ಒಟ್ಟು 4416 ಮತಗಟ್ಟೆಗಳು ಇವೆ ಎಂದರು. ಮತದಾರರು ತಮ್ಮ ಮತದಾನ ಕೇಂದ್ರ ಮಾಹಿತಿ: 9731979899 ಗೆ ಎಸ್ಎಂ ಎಸ್ ಮಾಡಿ ತಿಳಿದುಕೊಳ್ಳಬೇಕು. ಇಲ್ಲವೇ 0831-2565555 ದೂರವಾಣಿಗೆ ಕರೆ ಮಾಡಬಹುದು.
ಜಿಲ್ಲೆಯಲ್ಲಿ ಮಹಿಳಾ ಸಿಬ್ಬಂಧಿ ಹೊಂದಿದ 50 ಪಿಂಕ್ ಪೊಲೀಂಗ್ ಬೂತ್ ತೆರೆಯಲಾಗಿದೆ.

1) Passport
2)Driving License
3)service I’d cards with photograph PSUs/ Public Limited Companies, central / state Govt.
4)Bank/ Post passbook with photo
5)PAN card
6)Aadhar Card
7)smart card issued by RGI under NPR.
8)MNREGA Job card
9)Health Insurance smart card issued under ministry of labour
10)Pension document with photograph
11)Authenticated photo voter slip issued by the election machinery ಬಳಕೆ ಮಾಡಿ ಮತದಾನ ಮಾಡಬಹುದಾಗಿದೆ.

ವ್ಯವಸ್ಥೆ: ರ್ಯಾಂಪ್, ಕುಡಿಯುವ ನೀರು, ವಿದ್ಯುತ್ ಚಕ್ತಿ, ಪೀಠೋಪಕರಣ, ನಿರೀಕ್ಷಣಾ (Waiting Room) ಕೊಠಡಿ, ಶೌಚಾಲಯ ಒದಗಿಸಲಾಗಿದೆ. ವಿಶೇಷ ಚೇತನ ಮತದಾರರಿಗೆ ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ.

ಕುಡಚಿ ಕ್ಷೇತ್ರದಲ್ಲಿ ಮಾತ್ರ 19 ಉಮೇದುವಾರರಿರುವುದರಿಂದ ಪ್ರತಿ ಮತಗಟ್ಟೆಯಲ್ಲಿ 02 ಬ್ಯಾಲೆಟ್ ಯುನಿಟ್ ಕಾರ್ಯನಿರ್ವಹಿಸತಿವೆ. ಉಳಿದ 17 ಕ್ಷೇತ್ರಗಳಲ್ಲಿ 01 ಬ್ಯಾಲೆಟ್ ಇರುತ್ತವೆ. ಜಿಲ್ಲೆಯಲ್ಲಿ ಒಟ್ಟು 24, 288 ಸಿಬ್ಬಂಧಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ ಅಧ್ಯಕ್ಷಾಧಿಕಾರಿ ಹಾಗೂ 04 ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ವೆಬ್ ಕಾಸ್ಟಿಂಗ್: 124 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 180 ವಿಡಿಯೋಗ್ರಾಫಿ, 358 ಮೈಕ್ರೋ ಅಬ್ಸರ್ವರ್ ನಿಗಾ ಇಟ್ಟಿದ್ದು ಸಿಪಿಎಂಎಫ್ ಸುರಕ್ಷಾ ಸಿಬ್ಬಂಧಿ ಭದ್ರತೆ ನೋಡಿಕೊಳ್ಳುವರು. ಚುನಾವಣೆ ಸಲುವಾಗಿ 563 ಜೀಪ್, 446 ಬಸ್ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್ ಭದ್ರತೆ: ಜಿಲ್ಲೆಗೆ ಸಿಪಿಎಂಎಫ್ 39 ಕಂಪನಿ, 16 ಕೆಎಸ್ ಆರ್ ಪಿ ನಿಯೋಜಿಸಲಾಗಿದೆ.

ಇಲ್ಲಿಯವರೆಗೆ ಒಟ್ಟು ನೀತಿ ಸಂಹಿತೆ ಉಲ್ಲಂಘನೆ 50 ದೂರುಗಳು ದಾಖಲಾಗಿವೆ. ಅಕ್ರಮ ಸಾರಾಯಿ ಸಾಗಾಟದಲ್ಲಿ 648 ಪ್ರಕರಣಗಳು ದಾಖಲಾಗಿದ್ದು, 27 ಲಕ್ಷ 92 ಸಾವಿರ ಮೌಲ್ಯದ 12810 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡು ಅದರ ಮೊತ್ತ 49,17, 400 ರೂ ಎಂದು ಎಸ್. ಜಿಯಾವುಲ್ಲಾ ತಿಳಿಸಿದರು. ಮತದಾನ ಶನಿವಾರ ಸಂಜೆ ಮುಗಿಯುತ್ತಿದ್ದಂತೆ ಜಿಪಿಎಸ್ ವಾಹನದಲ್ಲಿ ಮತಯಂತ್ರಗಳನ್ನು ಮತ್ತು ಇತರ ಸಾಮಗ್ರಿಗಳನ್ನು ಬೆಳಗಾವಿ RPD ಕಾಲೇಜು ಭದ್ರತಾ ಕೋಣೆಯಲ್ಲಿ ಇಡಲಾಗುತ್ತದೆ. ಮತೆಣಿಕೆ ದಿನ ಮೇ. 15 ರವರೆಗೆ ಸೀಲ್ಡ್ ಕೊಠಡಿಗಳ ಭದ್ರತೆ ಕೇಂದ್ರಿಯ ಪಡೆಗಳು ನೋಡಿಕೊಳ್ಳುತ್ತವೆ ಎಂದರು. ಅಂದು ಬೆಳಿಗ್ಗೆ 8 ಕ್ಕೆ ಮತೆಣಿಕೆ ನಡೆಯಲಿದ್ದು, ಪೋಸ್ಟ್ ಮತಗಳು ಸಹ ಎಣಿಕೆಗೆ ಒಳಪಡಲಿವೆ ಎಂದರು.

ಕಮಿಷ್ನರ್ ಎಂ. ಚಂದ್ರಶೇಖರ್, ಸಿಇಓ ಆರ್. ರಾಮಚಂದ್ರನ್, ಎಸ್ಪಿ ಸುಧೀರಕುಮಾರ, ಎಡಿಸಿ ಡಾ. ಬೂದೆಪ್ಪ, ಎಕ್ಸೈಸ್ ಡಿಸಿ ಅರುಣಕುಮಾರ ಉಪಸ್ಥಿತರಿದ್ದರು.