SHARE

ಬೆಳಗಾವಿ: ಆಕರ್ಷಕ Pink Booth ಮತದಾನ ಬೆಳಗಾವಿ ಉತ್ತರ & ದಕ್ಷಿಣ ಮತಕ್ಷೇತ್ರಗಳ ತಲಾ ಒಂದು ಬೂತ್ ಗಮನ ಸೆಳೆಯಿತು. ನಗರದ ಉತ್ತರ ಕ್ಷೇತ್ರದಲ್ಲಿ ಬೂತ ನಂ. 33 JNMC ಕ್ಯಾಂಪಸ್ ಹಾಗೂ ದಕ್ಷಿಣ ಮತಕ್ಷೇತ್ರದಲ್ಲಿ ಬೂತ ನಂ. 11 ರಲ್ಲಿ ಲೇಲೆಗ್ರೌಂಡ್ ಕನ್ನಡ ಬಾಲಕಿಯರ ಶಾಲೆಯಲ್ಲಿ ಎರಡು ಪಿಂಕ್ ಬೂತಗಳು ಕಾರ್ಯ ನಿರ್ವಹಿಸಿದವು. ಮಹಿಳೆಯರ ಮತಸಂಖ್ಯೆ ಹೆಚ್ಚಿದ್ದು, ಮತದಾನದ ಶೇಕಡಾ ಹೆಚ್ಚಿಸಲು ನಿರ್ಮಿಸಲಾದ ಪಿಂಕ್ ಬೂತಗಳು ವಿಶೇಷ ಗಮನ ಸೆಳೆದವು. ಈ ಬೂತಗಳಲ್ಲಿ ಮಹಿಳಾ & ಪುರುಷ ಮತದಾರರಿದ್ದರೂ ಸಹ ಮಹಿಳಾ ಮತದಾರರಿಗೆ ಉತ್ತೇಜನ ನೀಡಲಾಗುತ್ತಿದೆ.ಮತಾದಾನ ಬೂತನ ಎಲ್ಲ ಸಿಬ್ಬಂಧಿ ಮಹಿಳೆಯರಾಗಿದ್ದು, ಎಲ್ಲರ ಬಟ್ಟೆ ಸಹ ಪಿಂಕ್, ಕೊಠಡಿ ಪಿಂಕ್, ಕರ್ಟನ್ ಪಿಂಕ್, ಬಾಗಿಲು ಪಿಂಕ್ ಬಲೂನನಿಂದ ಶೃಂಗರಿಸಲ್ಪಟ್ಟಿತು. ಟೋಟಲ್ Pink Booths ಗಳು ಅತ್ಯಾಕರ್ಷಣೆ ಪಡೆದವು.