SHARE

ಬೆಳಗಾವಿ: ಯಡ್ಡಿ-ಸಿದ್ದು ಇಬ್ಬರೂ ನನ್ನ ಮನೆ ಬಾಗಿಲಿಗೆ ಬರಬೇಕಾಗುತ್ತದೆ ಎಂದು ಚುನಾವಣಾಪೂರ್ವ ಹೇಳಿದ್ದ ದೊಡ್ಡಗೌಡರ ದೊಡ್ಡ ಮಾತು ನಿಜವಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸಭೆಗೂ ಮುನ್ನವೇ ಮಾಜಿ ಸಿಎಂ ಸಿದ್ದರಾಮಯ್ಯ ಈಗ ದೇವೆಗೌಡರ ಮಬೆಯತ್ತ ಹೊರಟಿದ್ದಾರೆ. ಹೆಚ್. ಡಿ. ದೇವೆಗೌಡ & ಎಚ್. ಡಿ. ಕುಮಾರಸ್ವಾಮಿ ಮನೆಗೆ ಸಿಎಂ ಸಿದ್ದರಾಮಯ್ಯ ಈಗ ಹೊರಟಿದ್ದು ಅಪ್ಪ-ಮಗನ ಆಶೀರ್ವಾದ ಪಡೆಯಲಿದ್ದಾರೆ‌. ಅಪ್ಪ ಮಗನ ರಾಜಕೀಯ ಎಂದು ಹೀಯಾಳಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ಈಗ ಅಪ್ಪ-ಮಗನ ಮನೆಗೇ ಹೋಗುವ ಅನಿವಾರ್ಯತೆ ಜನತಾ ನ್ಯಾಯಾಲಯ ನೀಡಿದೆ. ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.