SHARE

ಬೆಳಗಾವಿ: ಕಾಂಗ್ರೆಸ್ ಬೆಂಬಲ ಪಡೆದು ತಮ್ಮ ನೇತೃತ್ವದ ರಾಜ್ಯ ಸರಕಾರ ರಚಿಸಲು ಎಚ್. ಡಿ. ಕುಮಾರಸ್ವಾಮಿ ಮುಂದಾಗಿದ್ದು ಈಗ ರಾಜ್ಯಪಾಲರ ಭೇಟಿಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಬೆಂಬಲ ಪಡೆದು ಸರಕಾರ ರಚಿಸುತ್ತೇನೆ‌. ತಮ್ಮನ್ನು ಸಂಜೆ 6ಕ್ಕೆ ಹಕ್ಕು ಮಂಡನೆಗೆ ಭೇಟಿಯಾಗುತ್ತೇನೆ ಎಂದು ಕುಮಾರಸ್ವಾಮಿ ಪತ್ರದಲ್ಲಿ ತಿಳಿಸಿದ್ದು, ಕುಮಾರಸ್ವಾಮಿ ಪರ ಸುರೇಶಕುಮಾರ ಗವರ್ನರ್ ಬಳಿ ಮುಂಚಿತವಾಗಿ ತೆರಳಿದರು.

ಸಂಜೆ 5:30ರ ಒಳಗೆ ಕಾಂಗ್ರೆಸ್ & ಜೆಡಿಎಸ್ ಮೈತ್ರಿ ಸಭೆ ನಡೆದು, ಎರಡೂ ಪಕ್ಷಗಳ ನಾಯಕರು ಗವರ್ನರ್ ವಜುಭಾಯಿ ವಾಲಾ ಅವರನ್ನು ಭೇಟಿ ಆಗಿ ಸರಕಾರ ರಚನೆ ಹಕ್ಕು ಮಂಡನೆ ಮಾಡಲಿದ್ದಾರೆ.

ಬಿಜೆಪಿ ನಿಧಾನ ಗತಿಯಲ್ಲಿದ್ದು, ಕಾಂಗ್ರೆಸ್ ನ ದಿಢೀರ್ ನಿರ್ಧಾರ ಈಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯತ್ತ ಸಾಗಿದೆ. 118ಸದಸ್ಯರ ಬೆಂಬಲದ ಮೈತ್ರಿ ಸರಕಾರ ರಚನೆ ಆಗಲಿದೆ ಎಂಬುವುದು ಎಡೆಬಿಡದ ರಾಜಕೀಯ ಬೆಳವಣಿಗೆ. ಬಿಜೆಪಿ ನಿರ್ಧಾರ ಏನು ಎಂಥ ಮಾತ್ರ ನಿಗೂಢ. ಹೆಚ್ಚು ಸ್ಥಾನ ಪಡೆದ ಬಿಜೆಪಿ ಈಗ ‘ಇಂಗು’ ತಿಂದಂತಾಗಿದೆ.

ಮೈತ್ರಿ ಸಭೆಯಲ್ಲಿ ಸಿದ್ದು-HDK ಹಾಗೂ ಇತರ ನಾಯಕರು ಭಾಗವಹಿಸಲಿದ್ದು, ಜೆಡಿಎಸ್ ನಿಂದ ಉಚ್ಛಾಟಿತ ಸದಸ್ಯರೂ ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇವರೆಲ್ಲ ಪರಸ್ಪರ ಹೇಗೆ ಮುಖ ನೋಡುತ್ತಾರೆ ಕುತೂಹಲ ಕೆರಳಿಸಿದೆ. ಉಪಮುಖ್ಯಮಂತ್ರಿ ಸ್ಥಾನ ಕಾಂಗ್ರೆಸಗೆ ಕೊಟ್ಟರೂ ಆ ನಿರ್ಧಾರವೂ ದೊಡ್ಡಗೌಡರದ್ದೇ…!