SHARE

ಬೆಳಗಾವಿ: ಸತೀಶ ಜಾರಕಿಹೊಳಿ ಗೆಲುವು, ಗೆಲುವಲ್ಲ…ಸೋಲು! ಹೀಗೆ ಚರ್ಚೆ ಸಾರ್ವಜನಿಕವಾಗಿ ಇಂದು ಗರಿಗೆದರಿದೆ. ಬಿಜೆಪಿಯ ಮಾರುತಿ ಅಷ್ಠಗಿ, ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ಅವರಿಗೆ ಇನ್ನಿಲ್ಲದ ಟಫ್ ಫೈಟ್ ಕೊಟ್ಟಿದ್ದಾರೆ. ಇಂದು ಬೆಳಿಗ್ಗೆ ನಡೆದ ಯಮಕನಮರಡಿ ಮತಕ್ಷೇತ್ರದ ಮತ ಎಣಿಕೆ ವೇಳೆ ‘ನೆಕ್ ಟು ನೆಕ್’ ಫೈಟ್ ನಡೆದು ಕೊನೆಗೆ ಗೆದ್ದವರ ಲಿಸ್ಟನಲ್ಲಿ ಸತೀಶ ಜಾರಕಿಹೊಳಿ ಸ್ಥಾನ ಪಡೆದರೆ ವಿನಃ ಬಹು ಅಂತರದ ಮತದಿಂದ ಆರಿಸಿ ಬರಲಿಲ್ಲ ಬಿಡಿ ಎನ್ನುತ್ತಿದ್ದಾರೆ.

ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ 73,512 ಮತ ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿಯ ಮಾರುತಿ ಅಷ್ಟಗಿ 70,662 ಮತ ಗಿಟ್ಟಿಸಿ ಸಖತ್ ಫೈಟ್ ಕೊಟ್ಟು ರಾಜ್ಯದ ಗಮನ ಸೆಳೆದಿದ್ದಾರೆ. ಬರೀ 2850 ಮತಗಳಿಂದ ಕೊನೆಯ ಹಂತದಲ್ಲಿ ಮುನ್ನಡೆ ಸಾಧಿಸಿ ಸತೀಶ ಜಾರಕಿಹೊಳಿ ಚುನಾವಣೆ ಗೆದ್ದವರ ಲಿಸ್ಟ್ ಸೇರಿದಂತೆ ಆಗಿದೆ. ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಸೋಲುತ್ತಾರೆ ಎಂಬ ಸಾರ್ವಜನಿಕ ಚರ್ಚೆ counting ವೇಳೆ ಹರಡಿತ್ತಾದರೂ, ಕೊನೆಗೆ ಸತೀಶ ವಿಜಯಿಯಾಗುವ ಮೂಲಕ ತಮ್ಮ ಬೆಂಬಲಿಗರ ಆತಂಕ ದೂರ ಮಾಡಿದರು.