SHARE

ಬೆಳಗಾವಿ: ರಾಜ್ಯದ ಜನತೆ JDS ಪಕ್ಷಕ್ಕೆ ‘Kingship’ ಕೊಟ್ಟು, ಬಿಜೆಪಿ-ಕಾಂಗ್ರೆಸ್ ಪಕ್ಷಗಳನ್ನು ನಡು ನೀರಿನಲ್ಲಿ ಬಿಟ್ಟಿರುವುದರಿಂದ ಯಡ್ಡಿ-ಸಿದ್ದು ಈಗ ವಿಲವಿಲ ಒದ್ದಾಡಿ ಕಾದಾಟಕ್ಕೆ ಇಳಿದಿದ್ದಾರೆ.

‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಟ್ಯಾಗ್ ಲೈನ್ ನಿಂದ ಹೊರಬರಲು ಕಾಂಗ್ರೆಸ್ ಈಗ JDSಗೆ ಸಂಪೂರ್ಣ ಸರೆಂಡರ್ ಆಗಿದೆ. ದೇಶದಲ್ಲೇ ಧೂಳಿಪಟ ಆಗಲಿರುವ ಕಾಂಗ್ರೆಸ್ ಈಗ ಹೇಗಾದರೂ ಮಾಡಿ ಜೀವ ಉಳಿಸಿಕೊಳ್ಳಲು ದೇವೆಗೌಡರನ್ನು ಅಪ್ಪಿಕೊಂಡಿದೆ. ತನ್ನ ಉಳಿವಿಗಾಗಿ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಯತ್ನ ನಡೆಸಿದೆ. ಆದ್ದರಿಂದಲೇ ಮರುವಿಚಾರಿಸದೇ, ಯಾವುದೇ ಷರತ್ತು ಇಲ್ಲದೆಯೇ JDSಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಚೆಂಡು ಈಗ ಗವರ್ನರ್ ಅಂಗಳದಲ್ಲಿದೆ.

5 ಗಂಟೆಯ ಯಡ್ಡಿ-ಗವರ್ನರ್ ಭೇಟಿ ಫಲಿತಾಂಶದತ್ತ ಎಲ್ಲರ ಗಮನ ನೆಟ್ಟಿದೆ. 104 ಸ್ಥಾನದ ಬಿಜೆಪಿ ಇನ್ನುಳಿದ ಅಗತ್ಯವಾದ ‘9’ ನಂಬರ್ ಬಗ್ಗೆ ಗವರ್ನರ್‌ ಎದುರು ಏನು ಹೇಳುತ್ತದೆ ಎಂಬುವುದು ಕೌತುಕವೇ ಸರಿ. ದಿಢೀರ್ ರಾಜಕೀಯ ಈಗ
ದೇವೆಗೌಡರ ನಿವಾಸದಿಂದ, ಗವರ್ನರ್ ಮನೆಗೆ ಬದಲಾಗಿದೆ.

ವಾರ ಕಾಲಾವಕಾಶ: ಯಡಿಯೂರಪ್ಪ ಅವರು ತಮ್ಮ ಪಕ್ಷದ Majority ಪ್ರದರ್ಶನಕ್ಕಾಗಿ ಒಂದು ವಾರ ಕಾಲಾವಕಾಶ ಗವರ್ನರ್‌ ಬಳಿ ಕೇಳಿ ಹೊರ ಬಂದಿದ್ದಾರೆ.