SHARE

ಬೆಂಗಳೂರು: ವಿಧಾನಸೌಧದಲ್ಲಿ ಆಪರೇಷನ್​ ಕಮಲದ ಮತ್ತೊಂದು ಆಡಿಯೋ ಬಿಡುಗಡೆಯಾಗಿದೆ. ಆಡಿಯೋವನ್ನು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಬಿಡುಗಡೆ ಮಾಡಿದ್ದು, ಕಾಂಗ್ರೆಸ್​ ನ ಬಿ.ಜೆ.ಪುಟ್ಟಸ್ವಾಮಿ ಜೊತೆ ಬಿಜೆಪಿ ಕಡೆಯವರು ಮಾತನಾಡಿರುವ ಆಡಿಯೋ ಎಂದು ಹೇಳಿದ್ದಾರೆ.

ಆಡಿಯೋದಲ್ಲಿ ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಬಿ.ಜೆ.ಪುಟ್ಟಸ್ವಾಮಿಗೆ ಮನವಿ ಮಾಡಲಾಗಿದೆ. ಕಾಂಗ್ರೆಸ್​ ಶಾಸಕರಿಗೆ 15 ಕೋಟಿ​, ಮಂತ್ರಿ ಸ್ಥಾನದ ಆಫರ್​ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್​ ಶಾಸಕರ ಪತ್ನಿಗೆ ಆಫರ್​ ನೀಡಲಾಗಿದೆ. ಯಲ್ಲಾಪುರ ಶಾಸಕ ಶಿವರಾಮ್​ ಹೆಬ್ಬಾರ್ ಪತ್ನಿಗೆ ಕರೆ ಮಾಡಿ ಬಿಜೆಪಿಗೆ ಬೆಂಬಲ ನೀಡಿದರೆ ಮಗನ ಮೇಲಿನ ಕೇಸ್​ ವಾಪಸ್ ಆಮಿಷ ನೀಡಲಾಗಿದೆ.

ಗಂಟೆಗೊಂದರಂತೆ ಸರಣಿ ಆಡಿಯೋ ಬಿಡುಗಡೆ ಮಾಡಲು ಕಾಂಗ್ರೆಸ್​ ನಿರ್ಧರಿಸಿದ್ದು, ಶ್ರೀರಾಮುಲು-ಮುರಳೀಧರ್​ ರಾವ್​ ಸೇರಿದಂತೆ ಇನ್ನೂ ಮೂರು ಆಡಿಯೋಗಳು ಬಿಡುಗಡೆಯಾಗುವ ಸಾಧ್ಯತೆ ಇದೆ.