SHARE

ಬೆಳಗಾವಿ: ರಾಜಕೀಯ ಅರಾಜಕತೆ ಸೃಷ್ಟಿಸಿದ್ದ ಬಿಜೆಪಿ ಬಿದ್ದು ಹೋಗಿದೆ ಎಂದು ಕಾಂಗ್ರೆಸ್ ಮುಖಂಡ ವಿ. ಎಸ್. ಉಗ್ರಪ್ಪ ತಿಳಿಸಿದರು. ವಿಶ್ವಾಸ ಮತ ಯಾಚನೆ ಮಾಡದೇ ವಿಧಾನಸಭೆಯಿಂದ ಹೊರನಡೆದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಂತರ ಮಾತನಾಡಿದ ಅವರು ರಾಜಭವನ ದುರ್ಬಳಕೆ ಮಾಡಿಕೊಂಡು ಹಿಂಬಾಗಿಲ ಅಧಿಕಾರ ಹಿಡಿದಿದ್ದ ಬಿಜೆಪಿ, ಪ್ರಧಾನಿ ಮೋದಿ & ಶಹಾಗೆ ಹಿನ್ನಡೆಯಾಗಿದೆ.
ದೇಶದಲ್ಲಿ ಪ್ರಜಾಪ್ರಭುತ್ವ ಮತ್ತೆ ಉಳಿದುಕೊಂಡಿದೆ ಎಂಬ ಸಂಕೇತ ಇಂದು ನಡೆದಿದೆ ಎಂದರು. ಪ್ರಜಾಪ್ರಭುತ್ವ ಬುಡಮೇಲು ಮಾಡುವ ಯತ್ನಕ್ಕೆ ಹಿನ್ನಡೆ ಆಗಿದೆ ಎಂದರು.

ರಾಮಲಿಂಗಾರೆಡ್ಡಿ: ಸುಪ್ರೀಂ ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿದಿದೆ. 117 ಜನರ ಪಟ್ಟಿ ಗವರ್ನರ್ ಅವರಿಗೆ ಕೊಟ್ಟಿದ್ದೇವೆ. ಕುಮಾರಸ್ವಾಮಿ ಅವರಿಗೆ ಸರಕಾರ ರಚಿಸಲು ಗವರ್ನರ್ ಅನುವು ಮಾಡಬೇಕು ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಆಶಯ ಒತ್ತಾಯ ಮಾಡಿದರು.